ಯಶ್ ಯಾರ ಪರ ಚುನಾವಣಾ ಪ್ರಚಾರ ಮಾಡ್ತಾರೆ?

First Published 23, Mar 2018, 10:38 AM IST
Yash not Interested in Politics
Highlights

ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ನಟ ಯಶ್ ಹೇಳಿದ್ದಾರೆ. 

ಬೆಂಗಳೂರು (ಮಾ. 23): ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ನಟ ಯಶ್ ಹೇಳಿದ್ದಾರೆ. 

ಪಕ್ಷದ ಅಭ್ಯರ್ಥಿಗಳು ಸ್ನೇಹಿತರಾಗಿರಬೇಕು. ಇಲ್ಲವೇ ನನಗೆ ಅಂತವರ ಬಗ್ಗೆ ಗೊತ್ತಿರಬೇಕು. ಆದರೆ, ರಾಜಕೀಯದಲ್ಲಿ ನನಗೆ ಯಾರೂ ಗೊತ್ತಿಲ್ಲ. ರಾಜಕೀಯದ ನಂಟು ಇಲ್ಲ. ಪಕ್ಷದ ಪ್ರಚಾರಕ್ಕೆ ಹೋಗೋದು ನನಗೆ ವೈಯುಕ್ತಿಕವಾಗಿ ಇಷ್ಟವೇ ಇಲ್ಲ. ಎಂದು ಸ್ಪರ್ಶ ರೇಖಾ ನಿರ್ಮಾಣದ ಡೆಮೋಪೀಸ್ ಚಿತ್ರದ ಮುಹೂರ್ತ ದ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. 

loader