ಕೆಜಿಎಫ್’ನಲ್ಲಿ ಯಶ್ ಪೋಸ್ ಕೊಟ್ಟಿರುವ ಬೈಕ್ ಹುಟ್ಟಿಸಿದೆ ಕ್ರೇಜ್!

First Published 12, Mar 2018, 9:58 AM IST
Yash Bike Craze
Highlights

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ಕೆ.ಜಿ.ಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಮಾಡುತ್ತಿದೆ.

ಬೆಂಗಳೂರು (ಮಾ. 12): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ಕೆ.ಜಿ.ಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಮಾಡುತ್ತಿದೆ.

ಪೋಸ್ಟರ್ ಹಾಗು ಮೇಕಿಂಗ್ ನಿಂದ ಗಮನ ಸೆಳೆದ ಕೆ ಜಿ ಎಫ್ ಸಿನಿಮಾದಲ್ಲಿ ಸೂಪರ್ ಬೈಕ್ ಈಗ ಸೌಂಡ್ ಮಾಡುತ್ತಿದೆ..ಈ ಬೈಕ್ ಮುಂದೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲಿಷ್ ಆಗಿ ನಿಂತು ಪೋಸ್ ಕೊಟ್ಟಿದ್ರು. ಈಗ  ಆ ಬೈಕ್ ಹೇಗೆ ರೆಡಿ ಆಯಿತ್ತು, ಆನೋದು ರಿವೀಲ್ ಆಗಿದೆ.  ಕೆ ಜಿ ಎಫ್ ಸಿನಿಮಾದ ಸಿನಿಮಾಟೋಗ್ರಾಫರ್, ಭುವನ್ ಗೌಡ, ರಾಯಲ್ ಎನ್ ಫಿಲ್ಡ್ ಹಿಮಾಲಯ 500 ಸಿಸಿ ಬೈಕ್ ನ್ನ,  ಈ ಸಿನಿಮಾಕ್ಕೆ ತಕ್ಕಂತೆ ಡಿಸೈನ್ ಮಾಡಿದ್ದಾರೆ.

ಒಂದು ವಾರಗಳ ಕಾಲ, ವಿದ್ಯಾ ಪೀಠದಲ್ಲಿರುವ ಬೇಗ್ ಎನ್ನುವ ಗ್ಯಾರೇಜ್ ನಲ್ಲಿ, ಹೊಸ ಬೈಕ್ ನ್ನ ಎಲ್ಲಾ ಪಾರ್ಟ್ಗಳನ್ನ ಕಿತ್ತು ಹಾಕಿ ಹೊಸ ರೂಪ ಕೊಟ್ಟಿದ್ದಾರೆ.. ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಿರೋ, ಭುವನ್ ಗೌಡ ಕ್ಯಾಮರ ವರ್ಕ್​ ಮಾಡುತ್ತಿರುವ ಕೆ ಜಿ ಎಫ್ ಸಿನಿಮಾದಲ್ಲಿ ಈ ಬೈಕ್ ಹೇಗೆ ಕಾಣಿಸುತ್ತೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. 
 

loader