ನಾರ್ವೆ(ಸೆ.13): ಕಾವೇರಿ ಹೋರಾಟ ಬೆಂಗಳೂರಿನಲ್ಲಿ ಉಗ್ರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇಷ್ಟು ಆದ್ರೂ ಪ್ರತಿಭಟನೆ ಹತೋಟಿಗೆ ಬಂದಿಲ್ಲ ಹೀಗಾಗಿ ನಟ ಯಶ್ ಪ್ರತಿಭಟನಕಾರರಲ್ಲಿ ನ್ಯಾಯ ನಮಗೆ ಸಿಗುತ್ತೆ ಸಮಾಧಾನವಾಗಿರಿ ಎಂದು ಮನವಿ ಮಾಡಿದ್ದಾರೆ. 

ಶಾಂತಿಯಿಂದ ನಡೆದುಕೊಳ್ಳಿ ನಾವು ಕನ್ನಡಿಗರು ಕಾನೂನನ್ನ ಕೈಗೆ ತೆಗೆದುಕೊಳ್ಳಬೇಡಿ ಬೆಂಕಿ ಹಚ್ಚುವುದು ಹಾಗೂ ಹೊಡೆಯುವುದರಿಂದ ಯಾರಿಗೂ ಪ್ರಯೋಜನವಿಲ್ಲ ಅಂತಾ ಯಶ್ ಪ್ರತಿಭಟನಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸದ್ಯ ನಾರ್ವೆಯಲ್ಲಿ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಶೂಟಿಂಗ್ ನಲ್ಲಿ ಬಿಝಿ ಇರುವ ಯಶ್ ಅಲ್ಲಿಂದಲೇ ಪ್ರತಿಭಟನಕಾರರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾವೇರಿಗಾಗಿ ಶಾಂತಿಯುತ ಪ್ರತಿಭಟನೆಗೆ ಮುಂದಾಗಿ ಎಂದಿದ್ದಾರೆ.

ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚುವಂತೆ ಪೋಸ್ಟ್ ಗಳನ್ನು ಹಾಕಬೇಡಿ, ಯಾರನ್ನು ದಾರಿ ತಪ್ಪಿಸ ಬೇಡಿ. ಹಿಂಸಿಯಿಂದ ಯಾವುದೇ ಪ್ರಯೋಜವಿಲ್ಲ. ಕಾನೂನು ಕೈಗೆ ತೆಗದುಕೊಳ್ಳದೆ, ಯಾರ ಮೇಲು ಹಲ್ಲೆ ಮಾಡಬೇಡಿ. ತಮಿಳುನಾಡಿನಲ್ಲಿರುವ ಕನ್ನಡಿಗರ ಬಗ್ಗೆ ಯೋಚನೆ ಮಾಡಿ. ನೀವು ಇಲ್ಲಿ ಅವರ ಮೇಲೆ ಹಲ್ಲೆ ಮಾಡಿದರೆ ಅವರು ನಮ್ಮವರ ಮೇಲೆ ದಾಳಿ ಮಾಡುತ್ತಾರೆ ಇದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. 

ಅನ್ನ ತಿನ್ನುವ ನಾವೇಲ್ಲರು ರೈತರ ಪರವಾಗಿ ಹೋರಾಟ ಮಾಡೋಣ, ಕಾವೇರಿ ವಿಷಯದಲ್ಲಿ ಶಾಂತಿಯುತವಾಗಿ ವರ್ತಿಸಿ, ನ್ಯಾಯ ಪಡೆಯೋಣ ಎಂದು ಮನವಿ ಮಾಡಿದ್ದಾರೆ.