ಮಂಗಳೂರು :  ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆ ಸಂಕಲ್ಪದೊಂದಿಗೆ ಆರಂಭವಾಗಿರುವ ‘ಟೀಂ ಮೋದಿ’ ಈ ಬಾರಿ ವಿಶಿಷ್ಟ ರೀತಿಯಲ್ಲಿ ಅಭಿಯಾನ ಆರಂಭಿಸಿದೆ. 

ಶ್ರೀದೇವಿ ಮಹಾತ್ಮೆ ಎನ್ನುವ ಯಕ್ಷಗಾನ ಆಯೋಜನೆಗೆ ಮುಂದಾಗಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಈ ಯಕ್ಷಗಾನವನ್ನು ಟೀಂ ಮೋದಿ ಆಯೋಜಿಸಿದ್ದು, ಡಿ.29ರಂದು ರಾತ್ರಿ 8.30ಕ್ಕೆ ಮಣ್ಣಗುಡ್ಡೆ ಪ್ರದರ್ಶನ ನಡೆಯಲಿದೆ. 

ಕಳೆದ ಲೋಕಸಭೆ ಚುನಾವಣೆ ಸಂದರ್ಭ ನಮೋ ಬ್ರಿಗೇಡ್‌ ಹೆಸರಿನಲ್ಲಿ ಆರಂಭವಾದ ಸಂಘಟನೆ ಮೋದಿ ಗೆಲುವಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಬಳಿಕ ಪೂರ್ವ ನಿರ್ಧಾರದಂತೆ ನಮೋ ಬ್ರಿಗೇಡ್‌ ಅನ್ನು ವಿಸರ್ಜಿಸಿದ್ದು, ಇದೀಗ ಟೀಂ ಮೋದಿ ಹೆಸರಿನೊಂದಿಗೆ ಮತ್ತೊಮ್ಮೆ ಮೋದಿ ಅಭಿಯಾನ ಆರಂಭಿಸಿದೆ.