ಪಿಎ ವಿನಯ್ ಕಿಡ್ನಾಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಖಿದ್ದ ಬಿಎಸ್ವೈ ತನಿಖಾದಿಕಾರಿಗೆ ಪತ್ರ ಬರೆದಿದ್ದಾರೆ. ಮಲ್ಲೇಶ್ವರಂ ಎಸಿಪಿ ಮಾಜಿ ಸಿಎಂ ಯಡಿಯೂರಪ್ಪಗೆ ನೋಟಿಸ್ ಕೊಟ್ಟು ಇವತ್ತು ಬೆಳಗ್ಗೆ 10.30ಕ್ಕೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ರು. ಆದ್ರೆ, ಇಂದಿನ ವಿಚಾರಣೆಗೆ ಖುದ್ದು ಬಿಎಸ್'ವೈ ಹಾಜರಾಗದಿರಲು ನಿರ್ಧರಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖಾಧಿಕಾರಿಗೆ ಬಿಎಸ್ವೈ ಪತ್ರ ಬರೆದಿದ್ದಾರೆ.
ಬೆಂಗಳೂರು(ಸೆ.28): ಪಿಎ ವಿನಯ್ ಕಿಡ್ನಾಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಖಿದ್ದ ಬಿಎಸ್ವೈ ತನಿಖಾದಿಕಾರಿಗೆ ಪತ್ರ ಬರೆದಿದ್ದಾರೆ. ಮಲ್ಲೇಶ್ವರಂ ಎಸಿಪಿ ಮಾಜಿ ಸಿಎಂ ಯಡಿಯೂರಪ್ಪಗೆ ನೋಟಿಸ್ ಕೊಟ್ಟು ಇವತ್ತು ಬೆಳಗ್ಗೆ 10.30ಕ್ಕೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ರು. ಆದ್ರೆ, ಇಂದಿನ ವಿಚಾರಣೆಗೆ ಖುದ್ದು ಬಿಎಸ್'ವೈ ಹಾಜರಾಗದಿರಲು ನಿರ್ಧರಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖಾಧಿಕಾರಿಗೆ ಬಿಎಸ್ವೈ ಪತ್ರ ಬರೆದಿದ್ದಾರೆ.
ಯಾವ ದಾಖಲೆಗಳು ಬೇಕು ಅನ್ನೋದನ್ನ ಸ್ಪಷ್ಟವಾಗಿ ಕೇಳಿಲ್ಲ, ಜೊತೆಗೆ ನೀವು ಯಾವುದೇ ಸಾಕ್ಷ್ಯಗಳನ್ನು ಕೇಳಿದ್ರೆ ಕೊಡಲು ನಾನು ಸಿದ್ಧ ಅಂತ ಪತ್ರದಲ್ಲಿ ತಿಳಿಸಿದ್ದಾರೆ. ನನಗೆ 65 ವರ್ಷ ದಾಟಿದೆ, ಭದ್ರತಾ ದೃಷ್ಟಿಯಿಂದ ಪೊಲೀಸ್ ಸ್ಟೇಷನ್ಗೆ ಬರಲು ಸಾಧ್ಯವಿರುವುದಿಲ್ಲ. ಅಂತಿಮವಾಗಿ ಸತ್ಯ ಮೇಲುಗೈ ಆಗಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಕೇಳುವ ದಾಖಲೆಗಳು ನನ್ನ ಬಳಿ ಇದ್ದಲ್ಲಿ , ನೀಡಲು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ ಅಂತ ಪತ್ರದಲ್ಲಿ ತಿಳಿಸಿದ್ದಾರೆ.
