ಚಿತ್ರದುರ್ಗ (ಏ. 02): ಮೈಸೂರಿನ ಯುವರಾಜ ಚಿತ್ರದುರ್ಗದ ಕಲ್ಲಿನ ಕೋಟೆಗೆ ಭೇಟಿ ನೀಡಿದ್ದಾರೆ.  ಪಾಳೇಗಾರರ ಅಧಿದೇವತೆ ಏಕನಾಥೇಶ್ವರಿ ದರುಶನ ಪಡೆದಿದ್ದಾರೆ. 

 ಯುವರಾಜ, ಯದುವೀರ ಅವರನ್ನು ನೋಡಲು ಪ್ರವಾಸಿಗರು  ಮುಗಿಬಿದ್ದಿದ್ದಾರೆ. ಯುವರಾಜನನ್ನು ನೋಡಿ  ಕೋಟೆ ನಾಡಿನ ಜನ ಪುಳಕಿತರಾದರು. 

ಇದೇ ಮೊದಲ ಬಾರಿಗೆ ಕೋಟೆಗೆ ಭೇಟಿ ನೀಡಿದ್ದೇನೆ. ಐತಿಹಾಸಿಕ ಕೋಟೆ ನೋಡಿ ತುಂಬಾ ಸಂತೋಷವಾಗಿದೆ. ರಾಜ್ಯದ ರಾಜ ಮನೆತನಗಳಿಗೆ ಅವಿನಾಭಾವ ಸಂಬಂಧವಿದೆ.  ನನ್ನ ಅಜ್ಜಿ ಗಾಯಿತ್ರಿದೇವಿ ಅವರ ಹೆಸರಿನಲ್ಲಿ ಹಾಗೂ ವಾಣಿ ವಿಲಾಸ ಜಲಾಶಯಗಳಿವೆ ಎಂದು  ಹೇಳಿದರು. 

ರಾಜಕೀಯಕ್ಕೆ ಬರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ.  ಅಮಿತ್ ಷಾ ಅವರು ರಾಜಮಾತೆ ಪ್ರಮೋದಾದೇವಿ ಮತ್ತು ನನ್ನನ್ನು ಭೇಟಿ ಮಾಡಿದ್ದರು. ಆದರೆ ರಾಜ್ಯ ಸಭೆಗೆ ಆಯ್ಕೆ ಮಾಡಿರುವ ಬಗ್ಗೆ ಯಾವುದೇ ರೀತಿಯ ಆಫರ್ ನೀಡಿಲ್ಲ.  ಜನರು ಬಯಸಿದರೆ ಮುಂದೆ ರಾಜಕೀಯಕ್ಕೆ ಬರುತ್ತೇನೆ.  ಸದ್ಯಕ್ಕೆ ರಾಜಕೀಯ ನನ್ನ ದಾರಿಯಲ್ಲಿ ಇಲ್ಲ.  ರಾಜ್ಯದ ಎಲ್ಲಾ ಸಂಸ್ಥಾನಗಳನ್ನು ಸಂಪರ್ಕಿಸುವ ಕಾರಿಡಾರ್ ಮಾಡುವ ಚಿಂತನೆ ಇದೆ.  ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು.  ಪ್ರವಾಸಿಗರೂ ಕೂಡ ಇಂತಹ ಈತಿಹಾಸಿಕ ಸ್ಥಳಗಳ ಸ್ವಚ್ಚತೆಗೆ ಆದ್ಯತೆ ಕೊಡಬೇಕು ಎಂದಿದ್ದಾರೆ.