ರಾಜವಂಶಸ್ಥ ಯದುವೀರ್ ಬಿಜೆಪಿ ಸ್ಟಾರ್ ಕ್ಯಾಂಪೇನಿಯರ್!

Yaduveer Star campaigner
Highlights

ರಾಜವಂಶಸ್ಥ ಯದುವೀರ್ ಬಿಜೆಪಿ ಸ್ಟಾರ್ ಕ್ಯಾಂಪೇನಿಯರ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಮೈಸೂರು (ಮಾ. 29):  ರಾಜವಂಶಸ್ಥ ಯದುವೀರ್ ಬಿಜೆಪಿ ಸ್ಟಾರ್ ಕ್ಯಾಂಪೇನಿಯರ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಮೈಸೂರು ಭಾಗದಲ್ಲಿ ಬಿಜೆಪಿ ಪರ ಮತ ಯಾಚಿಸುವಂತೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇಳಲಿದ್ದಾರೆ.  ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡುವಂತೆ ಮನವಿ ಮಾಡಲಿದ್ದಾರೆ.  ಮಾರ್ಚ್ 30 ರಂದು  ಅರಮನೆಗೆ ಭೇಟಿ ನೀಡುವ ವೇಳೆ ಯದುವೀರ್ ಜೊತೆ ಅಮಿತ್ ಶಾ  ಮಾತುಕತೆ ನಡೆಸಲಿದ್ದಾರೆ.  ಈಗಾಗಲೇ ಯದುವೀರ್’ನನ್ನು  ಪಕ್ಷಕ್ಕೆ ಕರೆತರುವ ಪ್ರಯತ್ನಗಳೂ ನಡೆದಿವೆ. ಚುನಾವಣೆಯಲ್ಲಿ  ಸ್ಪರ್ಧೆ ಮಾಡಲು ಮನಸ್ಸು ಮಾಡದ ಹಿನ್ನೆಲೆಯಲ್ಲಿ ಬಿಜೆಪಿ ಹೊಸ ತಂತ್ರ ಹೆಣೆದಿದೆ. 
ಮೈಸೂರೂ ಭಾಗದಲ್ಲಿಯೇ ಸಿದ್ದರಾಮಯ್ಯರನ್ನು  ಕಟ್ಟಿ ಹಾಕಲು ಬಿಜೆಪಿ ಚಾಣಕ್ಯ ಅಮಿತ್ ಶಾ ಹೊಸ ತಂತ್ರ ಹೆಣೆದಿದ್ದಾರೆ. 

 

loader