ನಟ ಉಪೇಂದ್ರ ಸ್ಥಾಪಿಸಿರುವ ಪಕ್ಷದ ಬಗ್ಗೆ ಮೈಸೂರು ಮಹಾರಾಜ ಯದುವೀರ್ ಅವರು ಹೇಳಿಕೆ ನೀಡಿದ್ದಾರೆ. ‘ಉಪೇಂದ್ರ ಪ್ರಜಾಕೀಯ ಪಕ್ಷ ಕಟ್ಟಿದ್ದು ಒಳ್ಳೆದಾಯಿತು, ಹೊಸ ಆಲೋಚನೆ ಇಟ್ಟುಕೊಂಡು ಉಪೇಂದ್ರ ಅವರು ಪಕ್ಷ ಸ್ಥಾಪಿಸಿದ್ದಾರೆ,  ಸ್ವತಂತ್ರವಾಗಿ ಮಾಡುತ್ತಿರುವುದು ಒಳ್ಳೆಯದು’ ಎಂದು ಯದವೀರ್ ಹೇಳಿದ್ದಾರೆ.

ಚಾಮರಾಜನಗರ: ನಟ ಉಪೇಂದ್ರ ಸ್ಥಾಪಿಸಿರುವ ಪಕ್ಷದ ಬಗ್ಗೆ ಮೈಸೂರು ಮಹಾರಾಜ ಯದುವೀರ್ ಅವರು ಹೇಳಿಕೆ ನೀಡಿದ್ದಾರೆ.

‘ಉಪೇಂದ್ರ ಪ್ರಜಾಕೀಯ ಪಕ್ಷ ಕಟ್ಟಿದ್ದು ಒಳ್ಳೆದಾಯಿತು, ಹೊಸ ಆಲೋಚನೆ ಇಟ್ಟುಕೊಂಡು ಉಪೇಂದ್ರ ಅವರು ಪಕ್ಷ ಸ್ಥಾಪಿಸಿದ್ದಾರೆ, ಸ್ವತಂತ್ರವಾಗಿ ಮಾಡುತ್ತಿರುವುದು ಒಳ್ಳೆಯದು’ ಎಂದು ಯದವೀರ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕುರುಬರಕಟ್ಟೆ ಗ್ರಾಮದಲ್ಲಿ ಶ್ರೀಧರೆಗೆ ದೊಡ್ಡವರ ಸಂಸ್ಥಾನ ಮಠದ ಧ್ಯಾನ ಮಂದಿರ ಉದ್ಘಾಟಿಸಿ ಯದುವೀರ್ ಮಾತನಾಡಿದರು.

‘ಕರ್ನಾಟಕ್ಕೆ ಇನ್ನೊಂದು ಹೊಸ ಆಲೋಚನೆ ಬೇಕಾಗಿತ್ತು, ‘ಆ ಹೊಸ ಆಲೋಚನೆ ಉಪೇಂದ್ರ ಅವರು ಮಾಡಿದ್ದಾರೆ, ಈ ರೀತಿ ಪಕ್ಷ ಕರ್ನಾಟಕ್ಕೆ ಬೇಕಾಗಿತ್ತು, ಈ ಮೂಲಕ ಕರ್ನಾಟಕ್ಕೆ ಒಳ್ಳೆಯದು ಮಾಡಲಿ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ತನ್ನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಯದುವೀರ್, ‘ನನಗೆ ಸದ್ಯಕ್ಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ’ ಎಂದು ಹೇಳಿದ್ದಾರೆ.