ಮೋದಿಗೆ ಪ್ರಧಾನಿ ಪದವಿಯ ಅಹಂ ಹೆಚ್ಚಿದೆ : ಅಣ್ಣಾ ಹಜಾರೆ

news | Monday, January 22nd, 2018
Suvarna Web Desk
Highlights

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಜ.22): ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರಿಗೆ ಪ್ರಧಾನಿ ಎಂಬ ಅಹಂ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ತಾವು ಅವರಿಗೆ ಬರೆದ ಯಾವುದೇ ಪತ್ರಕ್ಕೂ ಕೂಡ ಅವರು ಇದುವರೆಗೂ ತಮಗೆ ಪ್ರತ್ಯುತ್ತರ ನೀಡಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯ ಅಟ್ಪಾಡಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬಗ್ಗೆ ಹೇಳಿದ್ದಾರೆ. ತಾವು ಇದುವರೆಗೂ ಕೂಡ ಪ್ರಧಾನಿ ಅವರಿಗೆ ಸುಮಾರು 30ಕ್ಕೂ ಅಧಿಕ ಪತ್ರಗಳನ್ನು ಬರೆದಿದ್ದೇನೆ. ಆದರೆ ಯಾವುದೇ ಪತ್ರಕ್ಕೂ ನನಗೆ ಪ್ರತ್ಯುತ್ತರ ನೀಡಿಲ್ಲ ಎಂದು ಹೇಳಿದ್ದಾರೆ .

ಅಲ್ಲದೇ ಮುಂದಿನ ಮಾರ್ಚ್ 23ರಿಂದ ದಿಲ್ಲಿಯಲ್ಲಿ ರೈತರ ವಿಚಾರವಾಗಿ ಸತ್ಯಾಗ್ರಹ ನಡೆಸಲಾಗುವುದು ಎಂದೂ ಕೂಡ ತಿಳಿಸಿದ್ದಾರೆ.

Comments 0
Add Comment