ಬೇಕರಿಯಲ್ಲಿ ಕೇಕ್ ಖರೀದಿಗೂ ಮುನ್ನ ಹತ್ತು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲ ಅಂದರೆ ರುಚಿಗೆ ಅಂತ ತಿನ್ನುವ  ಕೇಕ್'​ನಿಂದ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆ ಸೇರುವುದುಖಚಿತ.

ಮೈಸೂರು(ಜು.18): ಬೇಕರಿಯಲ್ಲಿ ಕೇಕ್ ಖರೀದಿಗೂ ಮುನ್ನ ಹತ್ತು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲ ಅಂದರೆ ರುಚಿಗೆ ಅಂತ ತಿನ್ನುವ ಕೇಕ್'​ನಿಂದ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆ ಸೇರುವುದುಖಚಿತ.

Add Asianetnews Kannada as a Preferred SourcegooglePreferred

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಸರಸ್ವತಿಪುರಂನಲ್ಲಿರುವ ಹೆಸರಾಂತ ಬೇಕರಿ ಬೇಕ್ ಪಾಯಿಂಟ್'​ನಲ್ಲಿ ಗ್ರಾಹಕರೊಬ್ಬರು ಕೇಕ್ ಖರೀದಿಸಲು ಬಂದಾಗ ಹುಳುಗಳು ಪತ್ತೆಯಾಗಿವೆ. ಬಳಿಕ ಕೇಕ್ ಅನ್ನು ಅಲ್ಲಿಯೇ ತೆರೆದು ನೋಡಿದಾಗ ಅದರಲ್ಲಿ ಹುಳುಗಳು ಮೊಟ್ಟೆಯಿಟ್ಟು ಮರಿಗಳು ಹೊರಬರುತ್ತಿರುವುದು ಕಾಣಿಸಿದೆ. ಇದರಿಂದ ಆಕ್ರೋಶಗೊಂಡ ಗ್ರಾಹಕ ಪಾಲಿಕೆ, ಪೊಲೀಸರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿ ಸಿಬ್ಬಂದಿಗಳನ್ನು ಮತ್ತು ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಇನ್ನು ಈ ವಿಡಿಯೋ ಮೈಸೂರು ನಗರದ ವಾಟ್ಸ್ ಅಪ್ ಗಳಲ್ಲಿ ವೈರಲ್ ಆಗಿದ್ದು, ಸುದ್ದಿ ತಿಳಿದ ನಗರ ಪಾಲಿಕೆ ಅಧಿಕಾರಿಗಳು ಬೇಕರಿಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೇಕ್ ಪಾಯಿಂಟ್ ಮಾಲೀಕನಿಗೆ ನೋಟಿಸ್ ಸಹ ನೀಡಿದ್ದಾರೆ.