ಮೆಡಿಕಲ್ ಶಾಪ್'ನವರು ಹುಳ ಬಿದ್ದಿರುವ ಡ್ರಿಪ್ಸ್ ಬಾಟಲಿಯನ್ನು ನೀಡಿರುವ ಅಘಾತಕಾರಿ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ(ಜು.10): ಮೆಡಿಕಲ್ ಶಾಪ್'ನವರು ಹುಳ ಬಿದ್ದಿರುವ ಡ್ರಿಪ್ಸ್ ಬಾಟಲಿಯನ್ನು ನೀಡಿರುವ ಅಘಾತಕಾರಿ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಜ್ವರದಿಂದ ಬಳಲುತ್ತಿದ್ದ ಶಾಂತಮ್ಮ ಎಂಬುವವರು ದೊಡ್ಡಬಳ್ಳಾಪುರದ ನಂದಿ ಮಲ್ಟಿಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗೆ ದಾಖಲಿಗಿದ್ದರು. ವೈದ್ಯರು ಬರೆದುಕೊಟ್ಟ ಡ್ರೀಪ್ಸ್ ಬಾಟಲಿಯನ್ನು ಆಸ್ಪತ್ರೆಯ ಮೆಡಿಕಲ್ ಶಾಪ್'ನಲ್ಲೇ ಖರೀದಿಸಿದ್ದಾರೆ. ಮೆಡಿಕಲ್ ಶಾಪ್'ನವರು ಕೊಟ್ಟ ಬಾಟಲಿ ಒಳಗೆ ಹುಳಗಳಿರುವುದು ಪತ್ತೆಯಾಗಿದೆ.
ಇನ್ನೂ ಗ್ಲೂಕೋಸ್ ಬಾಟಲ್ ಮೇಲೆ ಎಕ್ಸ್ಪಾಯರಿ ಡೇಟ್, ಬ್ಯಾಚ್ ನಂಬರ್ ಕೂಡ ಇರಲಿಲ್ಲ. ರೋಗಿಯ ಸಂಬಂಧಿಕರು ಈ ಬಗ್ಗೆ ಪ್ರಶ್ನಿಸಿದರೆ ಮೆಡಿಕಲ್ ಶಾಪ್'ನವರು ಹಾರಿಕೆ ಉತ್ತರ ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಶಾಂತಮ್ಮ ಸಂಬಂಧಿಕರು ಹಾಗೂ ಕನ್ನಡಪರ ಸಂಘಟನೆಗಳು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿವೆ. ಆರೋಗ್ಯಾಧಿಕಾರಿಗಳು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
