1,341 ಮೀಟರ್ ಉದ್ದದ ಈ ಸೇತುವೆಗೆ ₹ 977 ಕೋಟಿ ವೆಚ್ಚವಾಗಿದೆ. ಜಗತ್ತಿನ ಹತ್ತು ಅತಿ ಎತ್ತರದ ಸೇತುವೆಗಳಲ್ಲಿ ಎಂಟು ಸೇತುವೆಗಳು ಚೀನಾದಲ್ಲೇ ಇವೆ.
ಬೀಜಿಂಗ್
ಜಗತ್ತಿನ ಅತಿ ಎತ್ತರದ ಸೇತುವೆ ಚೀನಾದಲ್ಲಿ ಲೋಕಾರ್ಪಣೆಗೊಂಡಿದೆ. ಚೀನಾದ ನೈಋತ್ಯ ಭಾಗದ ಎರಡು ಪ್ರಾಂತ್ಯಗಳನ್ನು ಜೋಡಿಸುವ ಈ ಮಹಾ ಸೇತುವೆ, ಪ್ರಸ್ತುತ ಬೇಕಾಗುತ್ತಿದ್ದ ಸಮಯದ ಶೇ. 75ರಷ್ಟು ಸಮಯವನ್ನು ಉಳಿಸುತ್ತದೆ.
ಯುನ್ನಾನ್ ಮತ್ತು ಗುಯ್'ಝೌ ಪ್ರಾಂತ್ಯಗಳ ನಡುವೆ ಸಂಪರ್ಕ ಕಲ್ಪಿಸುವ ನದಿಯೊಂದರ ಮೇಲೆ ಬೀಪಾಂಜಿಯಾಂಗ್ ಸೇತುವೆ ಸುಮಾರು 565 ಮೀಟರ್ (1,854 ಅಡಿ) ಎತ್ತರದಲ್ಲಿ ನಿರ್ಮಾಣವಾಗಿದೆ. ಯುನ್ನಾನ್'ನ ಕ್ಸುವಾನ್'ವೇಯ್‌ನಿಂದ ಗುಯ್'ಝೌನ ಶುಶೆಂಗ್‌ಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣದಿಂದ ಈ ಹಿಂದೆ ಸುತ್ತು ಬರಬೇಕಾಗಿದ್ದ ಸಮಯದಲ್ಲಿ ನಾಲ್ಕು ಗಂಟೆಗೂ ಅಧಿಕ ಸಮಯವನ್ನು ಉಳಿಸಬಹುದಾಗಿದೆ.
1,341 ಮೀಟರ್ ಉದ್ದದ ಈ ಸೇತುವೆಗೆ ₹ 977 ಕೋಟಿ ವೆಚ್ಚವಾಗಿದೆ. ಜಗತ್ತಿನ ಹತ್ತು ಅತಿ ಎತ್ತರದ ಸೇತುವೆಗಳಲ್ಲಿ ಎಂಟು ಸೇತುವೆಗಳು ಚೀನಾದಲ್ಲೇ ಇವೆ.
ಬೀಪಾಂಜಿಯಾಂಗ್ ಸೇತುವೆಯ ಪ್ರಮುಖ ಅಂಶಗಳು
ಎಲ್ಲಿ ನಿರ್ಮಾಣ: ನೈಋತ್ಯ ಚೀನಾದ ಗಯ್‌ಝೌ ಮತ್ತು ಯುನ್ನಾನ್ ಪ್ರಾಂತ್ಯದ ಗಡಿಯಲ್ಲಿ
ಎಷ್ಟು ಎತ್ತರ?: 565 ಮೀಟರ್
ಎಷ್ಟು ಉದ್ದ?: 1,340 ಮೀಟರ್
ಎಷ್ಟು ವೆಚ್ಚ?: ₹ 977 ಕೋಟಿ
ಯಾವ ಹೆದ್ದಾರಿ ಸಂಪರ್ಕಿಸುತ್ತದೆ?
ದಕ್ಷಿಣ ಚೀನಾದ ಗಯ್‌ಝೌ ರಾಷ್ಟ್ರೀಯ ಹೆದ್ದಾರಿ
ಎಷ್ಟು ವರ್ಷ ಬೇಕಾಯಿತು: ಸೇತುವೆ ನಿರ್ಮಾಣಕ್ಕೆ 3 ವರ್ಷ ತಗುಲಿತು
ಯಾವ ನದಿ ಮೇಲೆ ನಿರ್ಮಾಣಗೊಂಡಿದೆ?: ಬೀಪಾನ್ ನದಿ
ಜಗತ್ತಿನ ಟಾಪ್ ೧೦ ಅತಿ ಎತ್ತರದ ಸೇತುವೆಗಳು
- ಬೀಪಾಂಜಿಯಾಂಗ್ ಸೇತುವೆ (ಚೀನಾ) - 1,854 ಅಡಿ (2016)
- ಜಿನ್'ಶಾಜಿಯಾಂಗ್ ಸೇತುವೆ (ಚೀನಾ) - 1,680 ಅಡಿ (2011)
- ಸಿದು ನದಿ ಸೇತುವೆ (ಚೀನಾ) - 1,697 ಅಡಿ (2009)
- ಪುಲಿ ಸೇತುವೆ (ಚೀನಾ) - 1,591 ಅಡಿ (2015)
- ಯಾಚಿ ಸೇತುವೆ (ಚೀನಾ) - 1,444 ಅಡಿ (2016)
- ಕ್ವಿಂಗ್'ಶುಯಿಹೆ (ಚೀನಾ) - 1,332 ಅಡಿ (2016)
- ಹೆಗಿಗೊ ಜಾರ್ಜ್ ಪೈಪ್‌ಲೈನ್ ಸೇತುವೆ (ಪಪುವಾ ನ್ಯೂ ಗಿನಿ) - 1,542 ಅಡಿ (2005)
- ಬಲುವಾರ್ಟೆ ಸೇತುವೆ (ಮೆಕ್ಸಿಕೊ) - 1,280 ಕೋಟಿ
- ಬಲಿಂಘೆ ಸೇತುವೆ (ಚೀನಾ) - 1,214 ಅಡಿ (2009)
- ಬೀಪಾಂಜಿಯಾಂಗ್ ಸೇತುವೆ ಗುವಾನ್'ಜಿಂಗ್ (ಚೀನಾ) - 1,200 ಅಡಿ (2003)
