ದಡೂತಿ ಮಹಿಳೆ ಎಮನ್ ಅಹ್ಮದ್ ಪ್ರಕರಣ ವೈದ್ಯ ಲೋಕಕ್ಕೇ ಸವಾಲೆಸೆದಿತ್ತು. ಆದರೆ ಈ ಸವಾಲನ್ನು ಸ್ವೀಕರಿಸಿದ ಮುಂಬೈ ಆಸ್ಪತ್ರೆಯೊಂದರ ವೈದ್ಯರು ಈಕೆಗೆ ಚಿಕಿತ್ಸೆ ನೀಡಿ ತೂಕ ಕಡಿಮೆಯಾಗುವಂತೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು. ಇದರಂತೆ ಎಮನ್'ಳನ್ನು ಮುಂಬೈಗೆ ಕರೆತರಿಸಿ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತಲ್ಲದೇ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ವೈದ್ಯರು ಯಮನ್ ಒಬರೋಬ್ಬರಿ 250 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದರು. ಆದರೀಗ ವೈದ್ಯರ ವರದಿಗಳೆಲ್ಲಾ ಸುಳ್ಳು, ಎಮನ್ ತೂಕ ಇಳಿದಿಲ್ಲ ಎಂದು ಆಕೆಯ ಸಹೋದರಿ ವಿಡಿಯೋ ಒಂದರ ಮೂಲಕ ದೂರಿದ್ದಾರೆ
ಈಜಿಪ್ಟ್(ಎ.25): ದಡೂತಿ ಮಹಿಳೆ ಎಮನ್ ಅಹ್ಮದ್ ಪ್ರಕರಣ ವೈದ್ಯ ಲೋಕಕ್ಕೇ ಸವಾಲೆಸೆದಿತ್ತು. ಆದರೆ ಈ ಸವಾಲನ್ನು ಸ್ವೀಕರಿಸಿದ ಮುಂಬೈ ಆಸ್ಪತ್ರೆಯೊಂದರ ವೈದ್ಯರು ಈಕೆಗೆ ಚಿಕಿತ್ಸೆ ನೀಡಿ ತೂಕ ಕಡಿಮೆಯಾಗುವಂತೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು. ಇದರಂತೆ ಎಮನ್'ಳನ್ನು ಮುಂಬೈಗೆ ಕರೆತರಿಸಿ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತಲ್ಲದೇ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ವೈದ್ಯರು ಯಮನ್ ಒಬರೋಬ್ಬರಿ 250 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದರು. ಆದರೀಗ ವೈದ್ಯರ ವರದಿಗಳೆಲ್ಲಾ ಸುಳ್ಳು, ಎಮನ್ ತೂಕ ಇಳಿದಿಲ್ಲ ಎಂದು ಆಕೆಯ ಸಹೋದರಿ ವಿಡಿಯೋ ಒಂದರ ಮೂಲಕ ದೂರಿದ್ದಾರೆ
ಎಮನ್ ಅಹ್ಮದ್ ಸಹೋದರಿ ಸೈಮ್ಮಾ ವಿಡಿಯೋವೊಂದನ್ನು ಬಿಡುಗಡೆ ಮಾಡಿ ವೈದ್ಯರ ವರದಿಗಳೆಲ್ಲಾ ಸುಳ್ಳು , ಎಮನ್ಗೆ ಚಿಕಿತ್ಸೆ ನಡೆಯುತ್ತಿದೆ ಆದರೆ ಎಮನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಅವಳು ಮೊದಲಿನಂತೆಯೇ ಇದ್ದಾಳೆ ಎಂದು ತಿಳಿಸಿದ್ದಾಳೆ ಅಲ್ಲದೇ ಆಸ್ಪತ್ರೆ ಕೋಣೆಯೊಳಗಿನ ದೃಶ್ಯವನ್ನೂ ತೋರಿಸಿದ್ದಾಳೆ.
ಇತ್ತ ವೈದ್ಯರು ಮಾತ್ರ ಎಮನ್ ಸಹೋದರಿ ಮಾಡಿರುವ ಆರೋಪವನ್ನು ತಿರಸ್ಕರಿಸಿದ್ದಾರೆ. ಎಮನ್ ಸಹೋದರಿ ಬೇಕಂತಲೇ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಎಮನ್ ಈಜಿಪ್ಟ್'ಗೆ ಮರಳಿ ಹೋಗುವುದು ಇಷ್ಟವಿಲ್ಲ. ಆರ್ಥಿಕ ಕಾರಣಗಳಿಂದಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
