Asianet Suvarna News Asianet Suvarna News

ಇದಪ್ಪಾ ಸಂಶೋಧನೆ,,, ಟಿವಿ ಚಾನ್‌ಗಳಿಗೆ ಆ್ಯಂಕರ್‌ಗಳೇ ಬೇಕಾಗಿಲ್ಲ!

ಈ ಜಗತ್ತಿನಲ್ಲಿ ಪ್ರತಿ ದಿನ ಹೊಸ ಹೊಸ ಸಂಶೋಧನೆಗಳು ಆಗುತ್ತಲೆ ಇರುತ್ತವೆ. ಮಾನವ ಮಾಡುತ್ತಿದ್ದ ಅದೆಷ್ಟೋ ಕೆಲಸದ ಜಾಗದಲ್ಲಿ ಯಂತ್ರಗಳು ಬಂದು ವರ್ಷಗಳೆ ಕಳೆದಿವೆ. ಆದರೆ ಚೀನಾದ ಈ ಸಂಶೋಧನೆ ಮಾತ್ರ ಎಲ್ಲರನ್ನು ದಿಗಿಲು ಮಾಡಿದೆ. ಏನಪ್ಪಾ ಆ ಸಂಶೋಧನೆ ಅಂತೀರಾ ಮುಂದೆ ನೋಡಿ..!

Worlds first AI news anchor unveiled in China Research
Author
Bengaluru, First Published Nov 9, 2018, 9:01 PM IST

ಬೀಜಿಂಗ್ [ನ.09] ಜಗತ್ತಿನ ಪ್ರಪ್ರಥಮ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ನ್ಯೂಸ್‌ ಆ್ಯಂಕರ್‌ ಚೀನಾದಲ್ಲಿ ಸೃಷ್ಟಿಯಾಗಿ ವಾರ್ತೆಯನ್ನು ಓದಿದ್ದಾನೆ.

ನವೆಂಬರ್7 ವೂಝೆನ್‌ ನಲ್ಲಿ ನಡೆದಿದ್ದ ವಿಶ್ವ ಅಂತರ್ಜಾಲದ ಸಮ್ಮೇಳನದಲ್ಲಿ ಚೀನಾದ  ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಈ ಕೃತಕ ಬುದ್ದಿಮತ್ತೆ ನ್ಯೂಸ್ ಆ್ಯಂಕರ್‌ ನ ಅನಾವರಣ ಮಾಡಿತು.

ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ ಈ ಆ್ಯಂಕರ್‌ ತಾನು ಬರವಣಿಗೆಯಲ್ಲಿ ನೀಡಿದ್ದನ್ನು ತೆರೆಯ ಮೇಲೆ ಓದಬಲ್ಲೆ ಎಂದಿದ್ದಾನೆ.  ಚೀನದ ಕ್ಸಿನ್‌ಹುವಾ ಮತ್ತು ಸರ್ಚ್‌ ಇಂಜಿನ್‌ ಕಂಪೆನಿ ಸೊಗೋವ್‌ ಸಂಸ್ಥೆ ಜತೆಗೂಡಿ ಸೃಷ್ಟಿಸಿದ್ದ ಈ ನ್ಯೂಸ್ ಆ್ಯಂಕರ್‌ ಚೀನಾದ  ಝಿನುವಾದ ಜಾಂಗ್ ಜಾಹೋ ಎಂಬ ಆ್ಯಂಕರ್‌ ನ ಪ್ರತಿರೂಪವಾಗಿದ್ದು ಮನುಷ್ಯರಂತೆ ಭಾವನೆಗಳನ್ನು ವ್ಯಕ್ತಪಡಿಸಿದ್ದಾನೆ.

ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೊಸ ಬೆಳವಣಿಗೆಗಳು ಇದ್ದೇ ಇರುತ್ತವೆ. ಅದಕ್ಕೆ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಆದರೆ ಇನ್ನು ಮುಂದೆ ಈ ಹೊಸ ಆ್ಯಂಕರ್ ನನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


 

Follow Us:
Download App:
  • android
  • ios