Asianet Suvarna News Asianet Suvarna News

ಸೇಬು ಹಣ್ಣಿನಷ್ಟೇ ತೂಕವಿದ್ದ ವಿಶ್ವದ ಚಿಕ್ಕ ಮಗು ಆಸ್ಪತ್ರೆಯಿಂದ ಬಿಡುಗಡೆ!

ಹುಟ್ಟಿದಾಗ ಸೇಬು ಹಣ್ಣಿನಷ್ಟೇ ತೂಕವಿದ್ದ ವಿಶ್ವದ ಚಿಕ್ಕ ಮಗು| 5 ತಿಂಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ

World s smallest surviving baby who was born three months premature baby goes home
Author
Bangalore, First Published May 31, 2019, 10:18 AM IST

ಲಾಸ್‌ ಏಂಜೆಲೀಸ್‌[ಮೇ31]: ಹುಟ್ಟಿದಾಗ ಕೇವಲ ಒಂದು ಸೇಬು ಹಣ್ಣಿನ ತೂಕ ಅಂದರೆ 245 ಗ್ರಾಂ ತೂಕವಿದ್ದ ಮಗು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ಅತ್ಯಂತ ಕಡಿಮೆ ತೂಕವಿದ್ದರೂ, ಬದುಕುಳಿದ ಮಗು ಎಂಬ ದಾಖಲೆಗೆ ಪಾತ್ರವಾಗಿದೆ. ಜನಿಸಿದ 5 ತಿಂಗಳ ಬಳಿಕ ಮಗು ಇದೀಗ 2.5 ಕೆಜಿ ತಲುಪಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಸೇಬು ಹಣ್ಣಿನಷ್ಟು ತೂಕವಿದ್ದ ಶಿಶು ಈಗ ಆರೋಗ್ಯಪೂರ್ಣ

ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಗರ್ಭಿಣಿಯೊಬ್ಬರು ಕೇವಲ 23 ವಾರ ಹಾಗೂ 3 ದಿನ (6 ತಿಂಗಳಿಗಿಂತ ಕಡಿಮೆ) ತುಂಬಿದ್ದ ಮಗುವನ್ನು ಹೆತ್ತಿದ್ದರು. ಮಗುವಿಗೆ ಸೇಬೀ ಎಂದು ಹೆಸರಿಡಲಾಗಿತ್ತು.

Follow Us:
Download App:
  • android
  • ios