ಟೋಕಿಯೋ[ಜ.21]: ಒಂದೆಡೆ ನಡೆದಾಡುವ ದೇವರು ಶಿವೈಕ್ಯರಾಗಿದ್ದು, ಇಡೀ ನಾಡೇ ಶೋಕಸಾಗರದಲ್ಲಿ ಮುಳುಗಿದೆ. ವಿಶ್ವದ ಐದನೇ ಅತ್ಯಂತ ಹಿರಿಯ ವ್ಯಕ್ತಿ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಇದೀಗ 113 ವರ್ಷದ, ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಮಸಾಜೋ ನಾನಾಕಾ ಭಾನುವಾರದಂದು ಜಪಾನ್‌ನ ಉತ್ತರ ಭಾಗದ ಹೊಕ್ಕೈಡೋ ದ್ವೀಪದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 

1905ರ ಜುಲೈನಲ್ಲಿ ಜನಿಸಿದ್ದ ಮಸಾಜೋ ಅವರನ್ನು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿ ಗಿನ್ನಿಸ್‌ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದ್ದರು. ವಿ'ಹಾಟ್‌ ಸ್ಟ್ರಿಂಗ್‌ ಇನ್‌' ರೆಸ್ಟೊರೆಂಟ್‌ ನಡೆಸುತ್ತಿದ್ದ ಮಸಾಜೋ ನಿವೃತ್ತಿಗೊಂಡ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದರು. ಇವರಿಗೆ ಸಿಹಿ ತಿಂಡಿ ಎಂದರೆ ಬಹಳ ಇಷ್ಟವಿತ್ತು ಎಂದು ಕುಟುಂಬಮಂದಿ ತಿಳಿಸಿದ್ದಾರೆ. 

1905 ರ ಜುಲೈ ನಲ್ಲಿ ಜನಿಸಿದ್ದ ಮಸಾಜೋ ನಾನಾಕಾಗೆ 5 ಮಕ್ಕಳು. ಇವರಲ್ಲಿ ಮೂವರು ಜೀವಂತವಾಗಿದ್ದಾರೆ. 

ವಿಶ್ವ ಐದನೇ ಅತ್ಯಂತ ಹಿರಿಯರು ಸಿದ್ಧಗಂಗಾ ಶ್ರೀಗಳು ಶಿವೈಕ್ಯ

ಮಸಾಜೋ ನಾನಾಕಾ ನಿಧನದ ಬೆನ್ನಲ್ಲೇ, ವಿಶ್ವ ವಿಶ್ವ ಪ್ರಸಿದ್ಧ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳು ಕೂಡಾ ತಮ್ಮ 111ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಾರೆ. ವಿಶ್ವದ ಐದನೇ ಅತ್ಯಂತ ಹಿರಿಯರಾದ ಶ್ರೀಗಳ ಅಗಲಿಕೆಯಿಂದ ಭಕ್ತರಲ್ಲಿ ಶೋಕ ಮಡುಗಟ್ಟಿದೆ. 2019ರ ಮೊದಲ ತಿಂಗಳೇ ವಿಶ್ವದ ಇಬ್ಬರು ಹಿರಿಯರ ಅಗಲುವಿಕೆ ನಿಜಕ್ಕೂ ತುಂಬಲಾರದ ನಷ್ಟವಾಗಿದೆ.