Asianet Suvarna News Asianet Suvarna News

ವಿಶ್ವದ ಬಲಶಾಲಿ ಪಾಸ್‌ಪೋರ್ಟ್ ಲಿಸ್ಟ್ ಔಟ್: ಭಾರತಕ್ಕೆ ಯಾವ ಸ್ಥಾನ?

ವಿಶ್ವದ ಬಲಶಾಲಿ ಪಾಸ್‌ಪೋರ್ಟ್ ಲಿಸ್ಟ್ ಔಟ್| ಅಗ್ರ ಸ್ಥಾನದಲ್ಲಿ ಜಪಾನ್, ಸಿಂಗಾಪುರ| ಭಾರತಕ್ಕೆ ಯಾವ ಸ್ಥಾನ?

World most powerful passports revealed Know where India ranks
Author
Bangalore, First Published Jul 4, 2019, 2:33 PM IST

ನವದೆಹಲಿ[ಜು.04]: ವಿಶ್ವ ಪರ್ಯಟನೆಗೆ ಪಾಸ್ ಪೋರ್ಟ್ ಅತ್ಯಗತ್ಯ. ಕೆಲ ರಾಷ್ಟ್ರಗಳ ಪಾಸ್ಟ್ ಪೋರ್ಟ್ ಅದೆಷ್ಟು ಬಲಶಾಲಿ ಎಂದರೆ ಅದನ್ನು ಬಳಸಿ ವಿಶ್ವದೆಲ್ಲೆಡೆ ಸುತ್ತಾಡಲು ಯಾವುದೇ ಸಮಸ್ಯೆಗಳಾಗುವುದಿಲ್ಲ. ಹೆನಲ್ ಪಾಸ್ ಪೋರ್ಟ್ ಇಂಡೆಕ್ಸ್ ಪ್ರಸಕ್ತ ವರ್ಷದ ಪಟ್ಟಿ ಬಿಡುಗಡೆಗೊಳಿಸಿ ಅತ್ಯಂತ ಬಲಶಾಲಿ ಪಾಸ್ ಪೋರ್ಟ್ ಯಾವುದು ಎಂಬುವುದನ್ನು ಬಹಿರಂಗಪಡಿಸಿದೆ. 

ಈ ಪಟ್ಟಿಯಲ್ಲಿ ಜಪಾನ್ ಹಾಗೂ ಸಿಂಗಾಪುರ್ ನ ಪಾಸ್ ಪೋರ್ಟ್ ಅಗ್ರ ಸ್ಥಾನದಲ್ಲಿವೆ. ಇದನ್ನು ಬಳಸಿ ನೀವು ವೀಸಾ ಇಲ್ಲದೆ ಬರೋಬ್ಬರಿ 189 ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ. 2018ರಲ್ಲಿ ಜರ್ಮನಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಹಾಗಾದ್ರೆ ಭಾರತ ಯಾವ ಸ್ಥಾನದಲ್ಲಿದೆ? 

ಹೆನಲ್ ಪಾಸ್ ಪೋರ್ಟ್ ಇಂಡೆಕ್ಸ್ ಬಿಡುಗಡೆಗೊಳಿಸಿದ ಈ ಪಟ್ಟಿಯಲ್ಲಿ ಭಾರತ 58 ಮೊಬಿಲಿಟಿ ಸ್ಕೋರ್ ನೊಂದಿಗೆ, 86ನೇ ಸ್ಥಾನದಲ್ಲಿದೆ. ಒಂದು ವೇಳೆ ನಿಮ್ಮ ಬಳಿ ಭಾರತೀಯ ಪಾಸ್ ಪೋರ್ಟ್ ಇದ್ದರೆ, ವೀಸಾ ಇಲ್ಲದೆ ನೀವು 58 ದೇಶಗಳಿಗೆ ಪ್ರಯಾಣಿಸಬಹುದು. 2018ರಲ್ಲಿ ಭಾರತ 79ನೇ ಸ್ಥಾನದಲ್ಲಿತ್ತು ಎಂಬುವುದು ಗಮನಾರ್ಹ. ಕೇವಲ ಭಾರತ ಮಾತ್ರ ಈ ಸ್ಥಾನದಲ್ಲಿಲ್ಲ. ಮಾರ್ಟಿಯಾನಾ, ಸಾವೋ ಟೋಮ್ ಹಾಗೂ ಪ್ರಿನ್ಸಿಪೆ ಕೂಡಾ ಭಾರತದೊಂದಿಗೆ 86ನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ಯುಕೆ, ಅಮೆರಿಕಾ, ಬೆಲ್ಜಿಯಂ, ಕೆನಡಾ, ಗ್ರೀಸ್, ಐರ್ಲೆಂಡ್, ನರ್ವೆ ಸೇರಿದಂತೆ ಒಟ್ಟು 8 ರಾಷ್ಟ್ರಗಳು ಆರನೇ ಸ್ಥಾನದಲ್ಲಿವೆ. ಡೆನ್ಮಾರ್ಕ್, ಇಟಲಿ ಹಾಗೂ ಲಗ್ಸಮಬರ್ಗ್ ಮೂರನೇ ಸ್ಥಾನದಲ್ಲಿವೆ. ಇನ್ನು ಫ್ರಾನ್ಸ್, ಸ್ಪೇನ್ ಹಾಗೂ ಸ್ವೀಡನ್ ನಾಲ್ಕನೇ ಸ್ಥಾನದಲ್ಲಿವೆ. ದಕ್ಷಿಣ ಕೊರಿಯಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಆದರೆ ಇರಾನ್ ಹಾಗೂ ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಈ ಬಾರಿಯೂ ಅಂತಿಮ ಸ್ಥಾನದಲ್ಲಿ ಉಳಿದುಕೊಂಡಿವೆ. ಇರಾಕ್ ನಾಗರಿಕರು ವೀಸಾವಿಲ್ಲದೆ 27 ಹಾಗೂ ಅಫ್ಘಾನಿಸ್ತಾನದ ನಾಗರಿಕರು ವೀಸಾವಿಲ್ಲದೆ ಕೆವಲ 25 ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ.

ಹೆನಲ್ ಪಾಸ್ ಪೋರ್ಟ್ ಇಂಡೆಕ್ಸ್ ಬಿಡುಗಡೆಗೊಳಿಸಿದ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2FkUlkH

Follow Us:
Download App:
  • android
  • ios