ಸಮುದ್ರದಲ್ಲಿ ವಿಶ್ವದಲ್ಲೇ ಅತ್ಯಂತ ಉದ್ದದ ಸೇತುವೆ ನಿರ್ಮಾಣ!

ಮತ್ತೊಂದು ತಾಂತ್ರಿಕ ಅದ್ಭುತ ಸೃಷ್ಟಿಸಿರುವ ಚೀನಾ, ವಿಶ್ವದಲ್ಲೇ ಅತಿ ಉದ್ದನೆಯದಾದ ಸಮುದ್ರ ಸೇತುವೆಯೊಂದನ್ನು ನಿರ್ಮಾಣ ಮಾಡಿದೆ. 

World Longest  Cross Sea Bridge Opens In China

ಬೀಜಿಂಗ್‌: ಮತ್ತೊಂದು ತಾಂತ್ರಿಕ ಅದ್ಭುತ ಸೃಷ್ಟಿಸಿರುವ ಚೀನಾ, ವಿಶ್ವದಲ್ಲೇ ಅತಿ ಉದ್ದನೆಯದಾದ ಸಮುದ್ರ ಸೇತುವೆಯೊಂದನ್ನು ನಿರ್ಮಾಣ ಮಾಡಿದೆ. ಬರೋಬ್ಬರಿ 55 ಕಿ.ಮೀ. ಉದ್ದವಿರುವ ಈ ಸೇತುವೆ ಅ.24ರ ಬುಧವಾರ ಲೋಕಾರ್ಪಣೆಯಾಗಲಿದೆ.

ಪಲ್‌ರ್‍ ನದಿಯ ಅಳಿವೆ ಪ್ರದೇಶದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. 2009ರಲ್ಲಿ ಕಾಮಗಾರಿ ಆರಂಭವಾಗಿದ್ದು, ಸಹಸ್ರಾರು ಕೋಟಿ ರು.ಗಳನ್ನು ವ್ಯಯಿಸಲಾಗಿದೆ. ಈ ಸಮುದ್ರ ಸೇತುವೆ ಹಾಂಕಾಂಗ್‌- ಝುಹೈ- ಮಕಾವು ನಗರಗಳನ್ನು ಬೆಸೆಯಲಿದೆ. ಇದರಿಂದಾಗಿ ಹಾಂಕಾಂಗ್‌ ಹಾಗೂ ಝುಹೈ ನಡುವಣ ಪ್ರಯಾಣ ಅವಧಿ ಕೇವಲ 30 ನಿಮಿಷಕ್ಕೆ ತಗ್ಗಲಿದೆ.

ಹಾಂಕಾಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಸೇತುವೆ ನೇರ ಸಂಪರ್ಕ ಒದಗಿಸಲಿದೆ. ಇದರಿಂದಾಗಿ ಲಂಟೌ ದ್ವೀಪದಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಹಾಂಕಾಂಗ್‌ನ ರಾಜಕಾರಣಿಗಳು ಆಕ್ಷೇಪ ಎತ್ತಿದ್ದಾರೆ. ಆದರೆ ಗಡಿಯಾಚೆಗಿನ 5000 ವಾಹನಗಳಿಗೆ ಮಾತ್ರವೇ ಅನುಮತಿ ನೀಡಲಾಗುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

Latest Videos
Follow Us:
Download App:
  • android
  • ios