ತೂಕ ಇಳಿಸುವ ಚಿಕಿತ್ಸೆಗೆ ಒಳಗಾಗಿರುವ ಇಮಾನ್, ಮುಂದಿನ ಆರು ತಿಂಗಳಲ್ಲಿ ಇನ್ನೂ 200 ಕೆಜಿಗೂ ಅಧಿಕ ತೂಕ ಕಳೆದುಕೊಳ್ಳಲಿದ್ದಾರೆ.
ಮುಂಬೈ(ಮಾ.07): 500 ಕೆಜಿ ತೂಕ ತೂಗುತ್ತಿದ್ದ ಈಜಿಪ್ಟ್ ಮಹಿಳೆ ಇಮಾನ್ ಅಹ್ಮದ್ ಮುಂಬೈಯ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆದ ಬಳಿಕ ಬರೋಬ್ಬರಿ 120 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ಈಜಿಪ್ಟ್ ಮೂಲದ 36ರ ಹರೆಯದ ಇಮಾನ್ ಕಳೆದ ತಿಂಗಳು ದಕ್ಷಿಣ ಮುಂಬೈಯ ಸೈಫೀ ಆಸ್ಪತ್ರೆಗೆ ಆಗಮಿಸಿ, ಚಿಕಿತ್ಸೆ ಪಡೆದಿದ್ದಾರೆ. 500 ಕೆಜಿ ತೂಗುತ್ತಿದ್ದ ಅವರು, ಇದೀಗ 120 ಕೆಜಿ ಕಳೆದುಕೊಂಡು, 380 ಕೆಜಿ ತೂಕ ತೂಗುತ್ತಾರೆ. ಅಲ್ಲದೆ ಎದ್ದು ಕುಳಿತುಕೊಳ್ಳುವಷ್ಟು ಸಮರ್ಥರಾಗಿದ್ದಾರೆ.
ತೂಕ ಇಳಿಸುವ ಚಿಕಿತ್ಸೆಗೆ ಒಳಗಾಗಿರುವ ಇಮಾನ್, ಮುಂದಿನ ಆರು ತಿಂಗಳಲ್ಲಿ ಇನ್ನೂ 200 ಕೆಜಿಗೂ ಅಧಿಕ ತೂಕ ಕಳೆದುಕೊಳ್ಳಲಿದ್ದಾರೆ. ಆಕೆಗೆ ಸುಮಾರು 16 ಮಂದಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಇಮಾನ್ ಬಾಲಿವುಡ್ ನಟ ಸಲ್ಮಾನ್ ಖಾನ್ ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾರೆ.
