Asianet Suvarna News Asianet Suvarna News

ವಿಶ್ವ ಆಹಾರ ದಿನ 2016: ಹಸಿವಿನ ವಿರುದ್ದದ ಹೋರಾಟದ ದಿನ

ಇಂದು ವಿಶ್ವ ಆಹಾರ ದಿನ. ಪ್ರತೀ ವರ್ಷ ಅಕ್ಟೋಬರ್ 16 ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

World Food Day A day to act against hunger

ನವದೆಹಲಿ (ಅ.16): ಇಂದು ವಿಶ್ವ ಆಹಾರ ದಿನ. ಪ್ರತೀ ವರ್ಷ ಅಕ್ಟೋಬರ್ 16 ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನವನ್ನು ಜಗತ್ತಿನ ಜನರು ಹಸಿವಿನ ವಿರುದ್ಧ ಕೆಲಸ ಮಾಡಲು ಮತ್ತು ಅದರ ನಿರ್ಮೂಲನೆಗಾಗಿ ಕೆಲಸ ಮಾಡಲು ಒಗ್ಗೂಡುವ ಸಲುವಾಗಿ ಈ ದಿನವನ್ನು ಆಚರಣೆಗೆ ತಂದಿತು.

ಹಸಿವಿನ ಬಗ್ಗೆ ಕಾಳಜಿ ಏಕೆ ವಹಿಸಬೇಕು?

ಬಹು ಮುಖ್ಯವಾಗಿ ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಈ ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಸೇವಿಸುವ ಹಕ್ಕು ಇದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತೀ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಸಾವಿಗೀಡಾಗುವ ಮಕ್ಕಳಲ್ಲಿ 5 ವರ್ಷದ ಒಳಗಿನ ಮಕ್ಕಳೆ ಹಚ್ಚು. ಸುಮಾರು ಶೇ.50 ರಷ್ಟು ಮಕ್ಕಳು ಬಡರಾಷ್ಟ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವರಧಿ ಪ್ರಕಾರ ಹಸಿವಿನ ತಾಪಕ್ಕೆ ಬಲಿಯಾದವರ ಸಂಖ್ಯೆ ಹಸಿವಿನ ತೀವ್ರತೆಯನ್ನು ತಿಳಿಸುತ್ತಿದೆ. ಈಗ ವಿಶ್ವ ಆಹಾರ ದಿನದ ಅಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಫಣ ತೊಡಲಾಗಿದೆ.

ಈ ಎಲ್ಲಾ ಅಂಶಗಳಿಂದ ಕಡಿಮೆ ವೆಚ್ಚದಲ್ಲಿ ಆಹಾರದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ಮತ್ತು ಹಸಿವಿನ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಆಹಾರ ದಿನವನ್ನು ಕಾರ್ಯ ರೂಪಕ್ಕೆ ತರಲಾಗಿದೆ.