ನಾಗಪುರ[ಸೆ.10]: ಚಂದ್ರಯಾನ 2 ನೌಕೆಯ ಭಾಗವಾಗಿದ್ದ ಲ್ಯಾಂಡರ್‌, ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡ ವಿಷಯ ಮತ್ತು ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುವ ಎರಡು ವಿಷಯಗಳು ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.

ಈ ನಡುವೆಯೇ ಈ ಎರಡೂ ವಿಷಯಗಳನ್ನು ಜೊತೆಗೂಡಿಸಿ ಮಹಾರಾಷ್ಟ್ರದ ನಾಗಪುರದ ಪೊಲೀಸರು ಮಾಡಿರುವ ಟ್ವೀಟೊಂದು ಭಾರೀ ವೈರಲ್‌ ಆಗಿದೆ. ಲ್ಯಾಂಡರ್‌ ಸಂಪರ್ಕ (ಸಿಗ್ನಲ್‌) ಕಡಿದುಕೊಂಡಿರುವ ಬಗ್ಗೆ ಹಾಸ್ಯವಾಗಿ ಪ್ರತಿಕ್ರಿಯಿಸಿರುವ ನಾಗಪುರ ಪೊಲೀಸರು ‘ಡಿಯರ್‌ ಡಿಯರ್‌ ವಿಕ್ರಮ್‌, ದಯವಿಟ್ಟು ಪ್ರತಿಕ್ರಿಯಿಸು. ನೀನು ಸಿಗ್ನಲ್‌ ಬ್ರೇಕ್‌ ಮಾಡಿದ್ದಕ್ಕೆ ದಂಡ ಹಾಕಲ್ಲ, ಸಂಪರ್ಕಕ್ಕೆ ಸಿಗು’ ಎಂದು ಟ್ವೀಟ್‌ ಮಾಡಿದ್ದರೆ.

ಇಸ್ರೋ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿದ್ದು ಹೇಗೆ?: ರೋಚಕ ಮಾಹಿತಿ ಬಹಿರಂಗ

ಪೊಲೀಸರ ಈ ಸಮಯಪ್ರಜ್ಞೆಗೆ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.