ಲಕ್ನೋದಲ್ಲಿ ನಡೆದ ಆಪರೇಶನ್ ನಲ್ಲಿ ಮೃತಪಟ್ಟ ಐಎಸ್ಐಎಸ್ ಶಂಕಿತನ ಮೃತದೇಹವನ್ನು ಸ್ವೀಕರಿಸಲು ಅವರ ತಂದೆ ನಿರಾಕರಿಸಿದ್ದಾರೆ.

ನವದೆಹಲಿ (ಮಾ.08): ಲಕ್ನೋದಲ್ಲಿ ನಡೆದ ಆಪರೇಶನ್ ನಲ್ಲಿ ಮೃತಪಟ್ಟ ಐಎಸ್ಐಎಸ್ ಶಂಕಿತನ ಮೃತದೇಹವನ್ನು ಸ್ವೀಕರಿಸಲು ಅವರ ತಂದೆ ನಿರಾಕರಿಸಿದ್ದಾರೆ.

ರಾಷ್ಟ್ರದ್ರೋಹಿ ಕೆಲಸ ಮಾಡಿದ ನನ್ನ ಮಗನ ದೇಹವನ್ನು ನಾವು ಸ್ವೀಕರಿಸುವುದಿಲ್ಲ. ಇದು ದೇಶದ ಹಿತಾಸಕ್ತಿಗೆ ವಿರೋಧವಾಗಿದ್ದು. ಆತ ಕೆಲಸ ಮಾಡಿಲ್ಲ ಅಂತ ನಾನು ಹೊಡೆದ ಬಳಿಕ 2 ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದಾನೆ. ಕಳೆದ ವಾರ ಕರೆ ಮಾಡಿ ನಾನು ಸೌದಿ ಅರೇಬಿಯಾಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ ಎಂದು ಶಂಕಿತನ ತಂದೆ ಸರ್ತಾಜ್ ಹೇಳಿದ್ದಾರೆ.