ಮುಂಬೈನ ಹಾಜಿ ಅಲ್ ದರ್ಗಾ ಒಳಗೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಲಾಗುವುದು ಎಂದು ದರ್ಗಾ ಟ್ರಸ್ಟ್ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.
ನವದೆಹಲಿ(ಅ.25): ಮುಂಬೈನ ಹಾಜಿ ಅಲ್ ದರ್ಗಾ ಒಳಗೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಲಾಗುವುದು ಎಂದು ದರ್ಗಾ ಟ್ರಸ್ಟ್ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಆದರೆ ಮಹಿಳೆಯರ ಪ್ರವೇಶಕ್ಕೆ ಅಗತ್ಯ ಮೂಲಸೌಕರ್ಯಗಳ ಬದಲಾವಣೆ ಅಗತ್ಯವಿದ್ದು, ಇದಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ಟ್ರಸ್ಟ್ ಕೋರಿದೆ.
ಮಸೀದಿ ಪ್ರವೇಶಿಸಲು ಪುರುಷರಂತೆ ಮಹಿಳೆಯರಿಗೂ ಅವಕಾಶ ನೀಡಬೇಕೆಂಬ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧದ ಟ್ರಸ್ಟ್ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಲೇವಾರಿ ಮಾಡಿದೆ.
ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯ ಟ್ರಸ್ಟ್ ಪರ ವಾದ ಮಂಡಿಸಿದರು. ಮಹಿಳೆಯರಿಗೆ ದರ್ಗಾದ ಪವಿತ್ರ ಸ್ಥಳ ಪ್ರವೇಶಿಸಲು ಟ್ರಸ್ಟ್ ಇಂಗಿತ ವ್ಯಕ್ತಪಡಿಸಿದೆ.
