Asianet Suvarna News Asianet Suvarna News

ಅಯ್ಯಪ್ಪ ದೇಗುಲಕ್ಕೆ ಬರುವ ಮಹಿಳೆಯರನ್ನು ಸಿಗಿದು 2 ಭಾಗ ಮಾಡಬೇಕು!

ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ಪ್ರವೇಶಕ್ಕಾಗಿ ಹೋರಾಟ ಆರಂಭಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಅಯ್ಯಪ್ಪ ಮಂದಿರಕ್ಕೆ ಪ್ರವೇಶಿಸಲು ಧೈರ್ಯ ತೋರುವ ಮಹಿಳೆಯರ ಕತ್ತು ಸೀಳಬೇಕೆಂದು ನಟನೊಬ್ಬ ಹೇಳಿಕೆ ನೀಡಿದ್ದಾರೆ.

Women who enter into Sabarimala should be ripped into 2 pieces
Author
Bengaluru, First Published Oct 13, 2018, 11:26 AM IST

ತಿರುವನಂತಪುರ: ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ ಎಂದು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಬರುವ ಮಹಿಳೆಯರನ್ನು ಸಿಗಿದು ಎರಡು ಭಾಗ ಮಾಡಬೇಕು ಎಂದು ಕೇರಳ ಚಿತ್ರ ನಟ ಹಾಗೂ ಬಿಜೆಪಿ ಬೆಂಬಲಿಗ ಕೊಲ್ಲಂ ತುಳಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎನ್‌ಡಿಎ ಆಯೋಜಿಸಿದ್ದ ರಾರ‍ಯಲಿಯಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಸಿಗಿದು ಎರಡು ಭಾಗ ಮಾಡಿ, ಒಂದು ಭಾಗವನ್ನು ತಿರುವನಂತಪುರದಲ್ಲಿರುವ ಕೇರಳ ಮುಖ್ಯಮಂತ್ರಿಗೆ ರವಾನಿಸಬೇಕು. ಮತ್ತೊಂದನ್ನು ದೆಹಲಿಗೆ ಕಳುಹಿಸಬೇಕು ಎಂದು ಅಬ್ಬರಿಸಿದ್ದಾರೆ.

ಶಬರಿಮಲೆ ಹೋರಾಟ ತೀವ್ರ

ಈ ನಡುವೆ, ಮಾಸಿಕ ಪೂಜೆಯ ನಿಮಿತ್ತ ಅ.17ರ ಬುಧವಾರ ದೇಗುಲದ ಬಾಗಿಲು ತೆರೆಯಲಿದೆ. ಈ ಸಂದರ್ಭದಲ್ಲಿ ಮಹಿಳೆಯರು ಪ್ರವೇಶಿಸಿದರೆ ಅವರ ಹಾದಿಗೆ ಅಡ್ಡಲಾಗಿ ಸಹಸ್ರಾರು ಭಕ್ತಾದಿಗಳು ಮಲಗಲಿದ್ದಾರೆ. ಮಹಿಳೆಯರು ದೇಗುಲ ಪ್ರವೇಶಿಸಲೇಬೇಕು ಎಂದಾದಲ್ಲಿ ಭಕ್ತಾದಿಗಳ ಎದೆಯ ಮೇಲೆ ತಮ್ಮ ಬೂಟು, ಚಪ್ಪಲಿ ಧರಿಸಿದ ಕಾಲನ್ನು ಇಟ್ಟು ಹೋಗಲಿ ಎಂದು ಅಯ್ಯಪ್ಪ ಧರ್ಮಸೇನೆಯ ನಾಯಕ ರಾಹುಲ್‌ ಈಶ್ವರ್‌ ಎಂಬುವವರು ತಿಳಿಸಿದ್ದಾರೆ.

ಮಸೀದಿಯಲ್ಲಿಯೂ ಮಹಿಳೆಯರಿಗೆ ಪ್ರವೇಶ ನೀಡಿ

Follow Us:
Download App:
  • android
  • ios