ವಿವಿಗೆ ವಿಜಯಪುರ ಜಲಮಂಡಳಿ ಯಿಂದ ಪೂರೈಕೆಯಾಗುವ ನೀರೇ ಆಧಾರ. 15 ದಿನಗಳಿಂದ ಕೊಲ್ಹಾರ ಬಳಿ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿದ್ದು, ನಗರಕ್ಕೆ ತಿಂಗಳಿಗೆ ಎರಡು ಬಾರಿ ನೀರು ಪೂರೈಕೆಯಾಗುತ್ತಿದೆ. ಇದರ ಪರಿಣಾಮ ವಿವಿಯಲ್ಲಿ ನೀರಿಗೆ ಹಾಹಾಕಾರ ಎದ್ದಿದ್ದು, ಕಳೆದೊಂದು ವಾರದಿಂದ ಟ್ಯಾಂಕರ್‌ ನೀರು ಖರೀದಿಸಿ ಸಮಸ್ಯೆ ನಿಭಾಯಿಸಲು ಪ್ರಯತ್ನ ಮಾಡಲಾಗಿತ್ತಾದರೂ ಅದು ಫಲ ನೀಡಲಿಲ್ಲ.

ವಿಜಯಪುರ: ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಗಂಭೀರವಾಗುತ್ತಿದ್ದು, ಇದರ ಬಿಸಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೂ ತಟ್ಟಿದೆ. ನೀರಿನ ಸಮಸ್ಯೆಯಿಂದಾಗಿ ವಿವಿಗೆ ಐದು ದಿನ ರಜೆ ಘೋಷಿಸಲಾಗಿದೆ.

ವಿವಿಗೆ ವಿಜಯಪುರ ಜಲಮಂಡಳಿ ಯಿಂದ ಪೂರೈಕೆಯಾಗುವ ನೀರೇ ಆಧಾರ. 15 ದಿನಗಳಿಂದ ಕೊಲ್ಹಾರ ಬಳಿ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿದ್ದು, ನಗರಕ್ಕೆ ತಿಂಗಳಿಗೆ ಎರಡು ಬಾರಿ ನೀರು ಪೂರೈಕೆಯಾಗುತ್ತಿದೆ. ಇದರ ಪರಿಣಾಮ ವಿವಿಯಲ್ಲಿ ನೀರಿಗೆ ಹಾಹಾಕಾರ ಎದ್ದಿದ್ದು, ಕಳೆದೊಂದು ವಾರದಿಂದ ಟ್ಯಾಂಕರ್‌ ನೀರು ಖರೀದಿಸಿ ಸಮಸ್ಯೆ ನಿಭಾಯಿಸಲು ಪ್ರಯತ್ನ ಮಾಡಲಾಗಿತ್ತಾದರೂ ಅದು ಫಲ ನೀಡಲಿಲ್ಲ.

ಇನ್ನು ಕ್ಯಾಂಪಸ್‌ನಲ್ಲಿ 7 ಕೊಳವೆ ಬಾವಿಗಳಿದ್ದರೂ ಅವು ಕೂಡ ಬತ್ತಿ ಹೋಗಿವೆ. ಈ ಹಿನ್ನೆಲೆಯಲ್ಲಿ ಮೇ 5ರಿಂದ 9ರವರೆಗೆ ವಿವಿಗೆ ರಜೆ ಘೋಷಿಸಲಾಗಿದೆ. ಹಿಂದೊಮ್ಮೆ ನೀರಿಲ್ಲದೆ ಕಲಬುರಗಿಯ ಕೇಂದ್ರೀಯ ವಿವಿಗೆ 15 ದಿನ ರಜೆ ಘೋಷಿಸಲಾಗಿತ್ತು.