ಲಖನೌ, [ಆ.10]:  ಸಹೋದರ-ಸಹೋದರಿ  ಸಂಬಂಧಕ್ಕೆ ಅಂದ ಚಂದದ ರೂಪ ಕೊಟ್ಟ ರಕ್ಷಾ ಬಂಧನ ಹಬ್ಬದ ವಿಶೇಷವಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಗಿಷ್ಟ್ ನೀಡಲಾಗಿದೆ.

ಈ ಆಫರ್ ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರ ಅನ್ವಯ.  ರಕ್ಷಾ ಬಂಧನದ ಅಂಗವಾಗಿ ಅಂದು ಉತ್ತರ ಪ್ರದೇಶದ ಎಲ್ಲ ಮಹಿಳೆಯರಿಗೆ ರಾಜ್ಯ ಸಾರಿಗೆಯ ಎಲ್ಲ ವರ್ಗದ ಬಸ್ಸುಗಳಲ್ಲಿ ಉಚಿತ ಪ್ರಯಾಣ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಘೋಷಿಸಿದ್ದಾರೆ. 

ರಾಜ್ಯದ ಎಲ್ಲ ನಾಗರಿಕರಿಗೆ ರಕ್ಷಾ ಬಂಧನದ ಶುಭ ಕೋರುತ್ತೇನೆ. ಇಂತಹ ಸುಸಂದರ್ಭದಲ್ಲಿ ರಾಜ್ಯ ಸರ್ಕಾರವು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೂಚನೆ ನೀಡಲಾಗಿದ್ದು, ರಕ್ಷಾ ಬಂಧನದ ದಿನ ಎಲ್ಲ ರೀತಿಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವಂತೆ ಹೇಳಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಉಚಿತ ಸಾರಿಗೆ ಪ್ರಯಾಣವು ಆಗಸ್ಟ್‌ 14ರ ಮಧ್ಯರಾತ್ರಿಯಿಂದ ಆಗಸ್ಟ್‌ 15ರ ಮಧ್ಯರಾತ್ರಿವರೆಗೆ ಜಾರಿಯಲ್ಲಿರಲಿದೆ. ಉಚಿತ ಪ್ರಯಾಣದ ವೇಳೆ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ. ಉತ್ತರ ಪ್ರದೇಶದ ಎಲ್ಲ ಸೋದರಿಯರಿಗೆ ರಾಜ್ಯ ಸರ್ಕಾರದ ಕಡೆಯಿಂದ ಉಡುಗೊರೆಯಿದು ಎಂದು ಹೇಳಿದ್ದಾರೆ.

ಅಣ್ಣ ಎಲ್ಲಿದ್ರೂ ಹೋಗಿ ಬನ್ನಿ
ಅಣ್ಣಾ ಅಷ್ಟೂ ದೂರದಲ್ಲಿದ್ದಾನೆ. ಹೋಗೋಕೆ ನೂರಾರು ರೂಪಾಯಿ ಬೇಕು ಎಂದು ಯೋಚಿಸುವ ಬಡ ಸಹೋದರಿಯರು ಯೋಚಿಸಬೇಕಿಲ್ಲ.ಯಾಕಂದ್ರೆ ಅವತ್ತು ಸರ್ಕಾರಿ ಬಸ್ ಗಳಲ್ಲಿ ಫುಲ್ ಫ್ರೀ ಪ್ರಯಾಣ ಇರಲಿದೆ. ಹಾಗಾಗಿ ಅಣ್ಣ\ತಮ್ಮ ಎಲ್ಲಿದ್ದರೂ [ಉತ್ತರ ಪ್ರದೇಶದಲ್ಲಿ ಮಾತ್ರ] ಹುಡುಕಿಹೊಂಡು ಹೋಗಿ ರಾಖಿ ಕಟ್ಟಿ ಯಶಸ್ಸು ಬಯಸಿ ಬನ್ನಿ. ಜತೆಗೆ ರಾಖಿ ಕಟ್ಟಿದಕ್ಕೆ ಸಹೋದರನಿಂದ ದುಡ್ಡು  ಕಸ್ಕೊಂಡು ಬನ್ನಿ.