ಕೌಟುಂಬಿಕ ಕಲಹ; ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ಮಹಿಳೆ

First Published 13, Mar 2018, 12:49 PM IST
Women Suicide
Highlights

ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಅದೃಷ್ಟವಶಾತ್ ಒಂದು ಮಗು ಸಾವಿನಿಂದ ಪಾರಾಗಿದ್ದು ತಾಯಿ, ಎರಡು ಮಕ್ಕಳು ಸಾವನ್ನಪ್ಪಿವೆ. 

ಬೆಂಗಳೂರು (ಮಾ.13): ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಅದೃಷ್ಟವಶಾತ್ ಒಂದು ಮಗು ಸಾವಿನಿಂದ ಪಾರಾಗಿದ್ದು ತಾಯಿ, ಎರಡು ಮಕ್ಕಳು ಸಾವನ್ನಪ್ಪಿವೆ. 

ವಿಜಯಪುರ ಜಿಲ್ಲೆ ಇಂಡಿ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದೆ.  ನಿನ್ನೆ ತಡರಾತ್ರಿ ರೈಲಿಗೆ ತಲೆಕೊಟ್ಟು ಮಕ್ಕಳೊಂದಿಗೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರು ಇಂಡಿ ತಾಲೂಕಿನ ಸಾತಪುರ ಗ್ರಾಮದವರು. ಸ್ಥಳಕ್ಕೆ ರೇಲ್ವೆ ಇಲಾಖೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

loader