ಗ್ರಾಹಕರ ಸೋಗಿನಲ್ಲಿ  ಬಂದ ಮೂವರು ಮಹಿಳೆಯರು ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನದ ಸರ ಎಗರಿಸಿದ ಘಟನೆ ಬೆಳಗಾವಿಯಲ್ಲಿ  ನಡೆದಿದೆ

ಬೆಳಗಾವಿ(ನ.05): ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಮಹಿಳೆಯರು ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನದ ಸರ ಎಗರಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಮೂವರು ಮಹಿಳೆಯರು ಬೆಳಗಾವಿಯ ಶನಿವಾರ ಕೂಟದಲ್ಲಿನ ಅಲಂಕಾರ್ ಜ್ಯೂವೇಲರ್ಸ್ ಗೆ ಬಂದಿದ್ದಾರೆ. ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಒಟ್ಟಿಗೆ ನಿಂತು ಚಿನ್ನದ ಮಾಂಗಲ್ಯದ ಸರ ತೋರಿಸುವಂತೆ ಹೇಳಿದ್ದಾರೆ. ಕೂಡಲೇ ಅಂಗಡೀ ಮಾಲಿಕ ಸತೀಶ, ಚಿನ್ನದ ಸರಗಳಿದ್ದ ಆಭರಣದ ಟ್ರೇ ಯನ್ನ ಇವರ ಮುಂದಿಟ್ಟಿದ್ದಾರೆ. 

ಅದರಲ್ಲೊಬ್ಬ ಕಳ್ಳಿ ಟ್ರೇ ಗೆ ಕೈ ಹಾಕಿ ಅದರಲ್ಲಿನ ಒಂದು ಮಾಂಗಲ್ಯದ ಸರವನ್ನ ತೆಗೆದು ತನ್ನ ಎಡಗೈ ಮುಷ್ಠಿಯಲ್ಲಿ ಮುಚ್ಚಿಟ್ಟುಕೊಂಡು, ಅಲ್ಲೇ ಇದ್ದ ಮತ್ತೊಂದು ಮಾಂಗಲ್ಯದ ಸರವನ್ನ ತೆಗೆದುಕೊಂಡು ಆಕಡೆಗೆ ತಿರುಗಿ ಅದನ್ನ ತನ್ನ ಕೊರಳಿಗೆ ಹಚ್ಚಿ ನೋಡುವ ನಾಟಕವಾಡುತ್ತ, ಮುಷ್ಠಿಯಲ್ಲಿ ಮುಚ್ಚಿಟ್ಟ ಮಾಂಗಲ್ಯದ ಸರವನ್ನ ತನ್ನ ಜೊತೆಯಿದ್ದ ಮತ್ತೊಬ್ಬ ಕಳ್ಳಿಯ ಕೈಗೆ ಕೊಟ್ಟು ಯಾಮಾರಿಸಿದ್ದಾಳೆ.

ಅಂದಾಜು 80 ಸಾವಿರ ಮೌಲ್ಯದ ಸರ ಎಗರಿಸಿ ಪರಾರಿಯಾಗಿದ್ದಾರೆ.ಕೆಲ ಹೊತ್ತಿನ ನಂತರ ಮಾಂಗಲ್ಯದ ಸರ ಕಾಣೆಯಾಗಿದ್ದನ್ನ ಗಮನಿಸಿದ ಮಾಲೀಕ ಸತೀಶ, ಸಿಸಿಟಿವಿ ಪರಿಶೀಲಿಸಿದಾಗ ಕಳ್ಳಿಯರು ಕೈಚಳಕ ನಡೆಸಿದ್ದು ಗೊತ್ತಾಗಿದೆ. ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.