ಅಂಗಡಿಗೆ ನುಗ್ಗಿ ಬಾಟಲ್ ಗಳನ್ನು ಎಸೆಯಲು ಸಹ ಯತ್ನಿಸಿದರು. ಅಲ್ಲದೇ ಟೈರ್’ಗೆ ಬೆಂಕಿ ಹಚ್ಚಿ  ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ (ಫೆ.26): ಗ್ರಾಮದಲ್ಲಿ ಬಾರ್​ ತೆರೆದಿರುವುದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ಹಾಸನ ತಾಲ್ಲೂಕಿನ ಕಾಮೇನಹಳ್ಳಿಯಲ್ಲಿ ನಡೆದಿದೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯ ಹೆದ್ದಾರಿಯಲ್ಲಿದ್ದ ಕೆಸಿಪಿ ಬಾರ್ ಕಾಮೇನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಇದನ್ನು ತೀವ್ರ ವಿರೋಧಿಸಿದ ಮಹಿಳೆಯರು, ಬಾರ್ ಎದುರು ಪ್ರತಿಭಟನೆ ನಡೆಸಿ ಮುಚ್ಚುವಂತೆ ಆಗ್ರಹಿಸಿದರು.

ಅಂಗಡಿಗೆ ನುಗ್ಗಿ ಬಾಟಲ್ ಗಳನ್ನು ಎಸೆಯಲು ಸಹ ಯತ್ನಿಸಿದರು. ಅಲ್ಲದೇ ಟೈರ್’ಗೆ ಬೆಂಕಿ ಹಚ್ಚಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.