ಮಹಿಳೆಯರಿಗೆ ತಲೆಯಲ್ಲಿ ಕಾಲು ಭಾಗವಷ್ಟೇ ಮೆದುಳು ಇರುತ್ತದೆ. ಹೀಗಾಗಿ ಅವರು ಕಾರು ಓಡಿಸಲು ಅನರ್ಹರು ಎಂದು ಸೌದಿ ಅರೇಬಿಯಾದ ಮೌಲ್ವಿಯೊಬ್ಬ ಹೇಳಿಕೆ ನೀಡಿದ್ದಾನೆ.
ದುಬೈ(ಸೆ.25): ಮಹಿಳೆಯರಿಗೆ ತಲೆಯಲ್ಲಿ ಕಾಲು ಭಾಗವಷ್ಟೇ ಮೆದುಳು ಇರುತ್ತದೆ. ಹೀಗಾಗಿ ಅವರು ಕಾರು ಓಡಿಸಲು ಅನರ್ಹರು ಎಂದು ಸೌದಿ ಅರೇಬಿಯಾದ ಮೌಲ್ವಿಯೊಬ್ಬ ಹೇಳಿಕೆ ನೀಡಿದ್ದಾನೆ.
‘ಮಹಿಳಾ ವಾಹನ ಚಲಾವಣೆಯ ಕೆಡುಕುಗಳು’ ಎಂಬ ವಿಷಯದ ಮೇಲೆ ಭಾಷಣ ಮಾಡಿದ ಶೇಖ್ ಅಲ್ ಹಿಜ್ರಿ ಎಂಬಾತ, ಮಹಿಳೆಯರಿಗೆ ಮೊದಲೇ ಅರ್ಧದಷ್ಟು ಮೆದುಳು ಇರುತ್ತದೆ. ಆದರೆ, ಅವರು ಶಾಪಿಂಗ್ ಹೋದಾಗ ಕಾಲು ಭಾಗವಷ್ಟೇ ಮೆದುಳು ಇರುತ್ತದೆ. ಹೀಗಾಗಿ ಸಂಪ್ರದಾಯಸ್ಥ ದೇಶದಲ್ಲಿ ಮಹಿಳೆಯರಿಗೆ ವಾಹನ ಓಡಿಸುವುದಕ್ಕೆ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
