ರಾಜ್ಯದ ಪ್ರಥಮ, ಕೊನೆಯ ಕ್ಷೇತ್ರದಲ್ಲಿ ಸ್ತ್ರೀ ಶಾಸಕಿಯರು

First Published 14, Apr 2017, 5:51 AM IST
women mlas at First and last constituency
Highlights

ಕರ್ನಾಟಕ ದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರವಿದ್ದು ಆಯೋ ಗದ ಪಟ್ಟಿಯಲ್ಲಿ ಬೆಳ ಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರ ಮೊದಲ ಕ್ರಮ ಸಂಖ್ಯೆ ಯಲ್ಲಿದೆ.

ಬೆಂಗಳೂರು(ಏ.14): ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಡಾ.ಮೋಹನ ಕುಮಾರಿ(ಗೀತಾ) ಜಯದೊಂದಿಗೆ ರಾಜ್ಯ ವಿಧಾನ ಸಭಾ ಕ್ಷೇತ್ರಗಳ ಪಟ್ಟಿಯ ಕೊನೆ ಕ್ಷೇತ್ರದಲ್ಲೂ ಮಹಿಳೆ ವಿರಾಜಮಾ ನವಾದಂತಾಗಿದೆ. ಕರ್ನಾಟಕ ದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರವಿದ್ದು ಆಯೋ ಗದ ಪಟ್ಟಿಯಲ್ಲಿ ಬೆಳ ಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರ ಮೊದಲ ಕ್ರಮ ಸಂಖ್ಯೆ ಯಲ್ಲಿದೆ. ಗುಂಡ್ಲುಪೇಟೆ ಕೊನೆ (224ನೇ) ಸ್ಥಾನದಲ್ಲಿದೆ. ಬಿಜೆಪಿಯ ಶಶಿಕಲಾ ಜೊಲ್ಲೆ ನಿಪ್ಪಾಣಿ ಶಾಸಕಿಯಾಗಿದ್ದರೆ, ಗೀತಾ ಗುಂಡ್ಲುಪೇಟೆಯಲ್ಲಿ ಚುನಾಯಿತರಾಗಿದ್ದಾರೆ.

loader