ಶಬರಿಮಲೆಗೆ ಮಹಿಳೆಯರನ್ನು ಬಿಟ್ಟರೆ ಸೆಕ್ಸ್ ಟೂರಿಸಂ' ಆಗುತ್ತೆ!

ಶಬರಿಮಲೆ(ಅ.14): ಶಬರಿಮಲೆಗೆ ಮಹಿಳೆಯರನ್ನು ಬಿಟ್ಟರೆ ಸೆಕ್ಸ್ ಟೂರಿಸಂ’ ಕುಖ್ಯಾತಿಯ ಥಾಯ್ಲೆಂಡ್ ಆಗಿ ಮಾರ್ಪಾಡಾಗುವ ಸಾಧ್ಯತೆಯಿದೆ ಎಂದು ತಿರುವಾಂಕೂರು ದೇವಸ್ವಂ ಸಮಿತಿ ಮುಖ್ಯ ಅರ್ಚಕ ಪ್ರಯರ್ ಗೋಪಾಲಕೃಷ್ಣನ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಶಬರಿಮಲೆಯಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶ ನೀಡುವುದರ ಬಗ್ಗೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ನಂತರ ಪ್ರತಿಕ್ರಿಯೆ ನೀಡಿದ ಗೋಪಾಲಕೃಷ್ಣನ್, ‘ಶಬರಿಮಲೆಯನ್ನು ‘ಸೆಕ್ಸ್ ಟೂರಿಸಂ’ ಕುಖ್ಯಾತಿಯ ಥಾಯ್ಲೆಂಡ್ ಮಾಡಬೇಡಿ. ಎಲ್ಲ ವಯಸ್ಸಿನ ಮಹಿಳೆಯರನ್ನು ಬಿಟ್ಟರೆ ಅವರ ಸುರಕ್ಷತೆಯ ಹೊಣೆ ತೊಂದರೆಯಾಗುವ ಸಾಧ್ಯತೆಯಿದೆ' ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೋರ್ಟ್ ಅನುಮತಿ ನೀಡಿದರೂ ಸಭ್ಯ ಕುಟುಂಬದ ಹೆಣ್ಣುಮಕ್ಕಳು ದೇಗುಲವನ್ನು ಪ್ರವೇಶಿಸಬಾರದು' ಎಂದು ತಿಳಿಸಿದ್ದಾರೆ.