Asianet Suvarna News Asianet Suvarna News

ಭಾರತದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಶೇ.20ರಷ್ಟುಕಡಿಮೆ ವೇತನ

ಮಹಿಳಾ ಸಮಾನತೆಯ ಬಗ್ಗೆ ನಮ್ಮಲ್ಲಿ ಸಾಕಷ್ಟುಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಇಂದಿಗೂ ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ವೇತನದ ನಡುವೆ ತಾರತಮ್ಯವಿದೆ.

Women in India earn 20 Percent less than men

ನವದೆಹಲಿ: ಮಹಿಳಾ ಸಮಾನತೆಯ ಬಗ್ಗೆ ನಮ್ಮಲ್ಲಿ ಸಾಕಷ್ಟುಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಇಂದಿಗೂ ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ವೇತನದ ನಡುವೆ ತಾರತಮ್ಯವಿದೆ.

ದೇಶದಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಶೇ. 20ರಷ್ಟುಕಡಿಮೆ ವೇತನ ನೀಡಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ವೇತನವನ್ನು ನಿರ್ಧರಿಸುವಾಗ ಲಿಂಗ ಆಧಾರಿತ ನೀತಿ ಪ್ರಮುಖ ಮಾನದಂಡವಾಗಿ ಪರಿಗಣಿಸಲ್ಪಡುತ್ತದೆ. ಮಾನ್ಸ್‌ಟರ್‌ ವೇತನ ಸೂಚ್ಯಂಕ ವರದಿಯಲ್ಲಿ ಈ ಅಂಶಗಳನ್ನು ತಿಳಿಸಲಾಗಿದೆ.

ಗಂಟೆಗಳ ಲೆಕ್ಕಾಚಾರದಲ್ಲಿ ನೋಡಿದಾಗ ಸಮಯೋಚಿತ ಸರಾಸರಿ ವೇತನ ಪುರುಷರಿಗೆ 231 ರು. ಮತ್ತು ಮಹಿಳೆಯರಿಗೆ 184 ರು. ನೀಡಲಾಗುತ್ತದೆ. ಆದರೆ, ವರ್ಷದಿಂದ ವರ್ಷಕ್ಕೆ ಈ ಅನುಪಾತ ಇಳಿಕೆಯಾಗುತ್ತಿದೆ. 2016ರಲ್ಲಿ ವೇತನದಲ್ಲಿ ಲಿಂಗ ತಾರತಮ್ಯ ಶೇ 24.8ರಷ್ಟಿದ್ದುದು, ಕಳೆದ ವರ್ಷಕ್ಕೆ ಶೇ.20ಕ್ಕೆ ಇಳಿಕೆಯಾಗಿದೆ. 5,500 ಪುರುಷ, ಮಹಿಳಾ ಕಾರ್ಮಿಕರ ಪ್ರತಿಕ್ರಿಯೆಗಳನ್ನು ಪಡೆದು ಮಾನ್ಸ್‌ಟರ್‌ ವೆಬ್‌ವಾಹಿನಿ, ಐಐಎಂ ಅಹಮದಾಬಾದ್‌ನ ಸಂಶೋಧನಾ ತಂಡದ ಸಹಭಾಗಿತ್ವದೊಂದಿಗೆ ಈ ಸಮೀಕ್ಷೆ ನಡೆಸಿದೆ.

Follow Us:
Download App:
  • android
  • ios