ಮಹಿಳಾ ಸಮಾನತೆಯ ಬಗ್ಗೆ ಸಾಕಷ್ಟುಚರ್ಚೆಗಳು ನಡೆಯುತ್ತಲೇ ಇವೆ. ಆದರೂ, ವೇತನದ ವಿಷಯದಲ್ಲಿ ಮಹಿಳೆ ಮತ್ತು ಪುರುಷರ ನಡುವೆ ತಾರತಮ್ಯ ಇನ್ನೂ ಮುಂದುವರಿದಿದೆ. 

ನವದೆಹಲಿ: ಮಹಿಳಾ ಸಮಾನತೆಯ ಬಗ್ಗೆ ಸಾಕಷ್ಟುಚರ್ಚೆಗಳು ನಡೆಯುತ್ತಲೇ ಇವೆ. ಆದರೂ, ವೇತನದ ವಿಷಯದಲ್ಲಿ ಮಹಿಳೆ ಮತ್ತು ಪುರುಷರ ನಡುವೆ ತಾರತಮ್ಯ ಇನ್ನೂ ಮುಂದುವರಿದಿದೆ.

ಭಾರತದಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಶೇ.16.1ರಷ್ಟುಕಡಿಮೆ ವೇತನ ನೀಡಲಾಗುತ್ತಿದೆ. ಕೆಲವೇ ಮಹಿಳೆಯರು ಮಾತ್ರ ತಮ್ಮ ಹುದ್ದೆಗಳಿಗಾಗಿ ಹೆಚ್ಚು ವೇತನ ಪಡೆಯುತ್ತಿದ್ದಾರೆ ಎಂದು ಕಾರ್ನ್‌ ಫೆರ್ರಿ ಲಿಂಗ ಆಧಾರಿತ ವೇತನ ಸೂಚ್ಯಂಕ ವರದಿ ತಿಳಿಸಿದೆ.

ಲಿಂಗ ಆಧಾರಿತ ವೇತನ ವ್ಯತ್ಯಾಸ ಚೀನಾದಲ್ಲಿ ಶೇ.12.1ರಷ್ಟಿದೆ. ಬ್ರೆಜಿಲ್‌ನಲ್ಲಿ ಶೇ.26.2, ಫ್ರಾನ್ಸ್‌ನಲ್ಲಿ ಶೇ.14.1, ಜರ್ಮನಿಯಲ್ಲಿ ಶೇ.16.8. ಯುಕೆಯಲ್ಲಿ ಶೇ.23.8 ಮತ್ತು ಅಮೆರಿಕದಲ್ಲಿ ಶೇ.17.6ರಷ್ಟುವೇತನ ವ್ಯತ್ಯಾಸವಿದೆ ಎಂದು ವರದಿ ತಿಳಿಸಿದೆ.