ಪಟ್ಟಣಂತಿಟ್ಟ (ಡಿ. 02): ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಶಬರಿಮಲೆ ದೇಗುಲಕ್ಕೆ ಮತ್ತೆ ಮಹಿಳೆಯರ ಪ್ರವೇಶ ಯತ್ನ ನಡೆದಿದೆ. ಆದರೆ ಭಕ್ತಾದಿಗಳು ಇಬ್ಬರು ಮಹಿಳಾ ಭಕ್ತರನ್ನು ಪಂಪಾ ಪ್ರದೇಶದಲ್ಲೇ ತಡೆದು ವಾಪಸ್‌ ಕಳುಹಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ ನವೋಜಮ್ಮಾ (32) ಮತ್ತು ಕೃಪಾವತಿ (42) 15 ಸದಸ್ಯರ ಗುಂಪಿನೊಂದಿಗೆ ಶನಿವಾರ ಪಂಪಾ ಸರೋವರವನ್ನು ತಲುಪಿದ್ದರು. ಭಕ್ತರಿಂದ ಪ್ರತಿಭಟನೆ ಎದುರಿಸಬೇಕಾದೀತು ಎಂದು ಪೊಲೀಸರು ನೀಡಿದ್ದ ಎಚ್ಚರಿಕೆಯನ್ನು ಲೆಕ್ಕಿಸದೇ ಮರಾಕುಟ್ಟಂ ಬಳಿ ಹೋಗಲು ಯತ್ನಿಸಿದ್ದರು. ಆದರೆ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ವಾಪಸ್‌ ಆಗಿದ್ದಾರೆ. ಬಳಿಕ ಇಬ್ಬರು ಮಹಿಳೆಯರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೆಲ ಪ್ರತಿಭಟನಾಕಾರರನ್ನೂ ಪೊಲೀಸರ ವಶಕ್ಕೆ ಪಡೆದಿದ್ದಾರೆ.