ಕುಸಿದು ಬಿದ್ದು ಸಾವು : ದೆವ್ವದ ಕಾಟದಿಂದ ಸತ್ತಳು ಎಂದರು

Women Death suspicious
Highlights

ಈ ಯುವತಿ ಮೂಲತಃ ಗುಲ್ಬರ್ಗ ಜಿಲ್ಲೆಯ ಕೊಲ್ಲೂರಿನವರಾಗಿದ್ದು, ಉದ್ಯೋಗಕ್ಕಾಗಿ ನೆಲಮಂಗಲ ಆದರ್ಶನಗರದಲ್ಲಿ ಕಳೆದ ಮೂರು ವರ್ಷದಿಂದ ವಾಸವಿದ್ದಳು.

ನೆಲಮಂಗಲ(ಮಾ.16): ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಿಶನಕುಂಟೆಯಲ್ಲಿ ನಡೆದಿದೆ.

ಭೀಮವ್ವ(18) ಮೃತ ಮಹಿಳೆ. ಸ್ಥಳೀಯರು ಈ ಸಾವನ್ನು ದೆವ್ವದ ಕಾಟದಿಂದ ಸಾವನ್ನಪ್ಪಿದ್ದಾಳೆ ಎಂದು ನಂಬಿದ್ದಾರೆ. ಈ ಯುವತಿ ಮೂಲತಃ ಗುಲ್ಬರ್ಗ ಜಿಲ್ಲೆಯ ಕೊಲ್ಲೂರಿನವರಾಗಿದ್ದು, ಉದ್ಯೋಗಕ್ಕಾಗಿ ನೆಲಮಂಗಲ ಆದರ್ಶನಗರದಲ್ಲಿ ಕಳೆದ ಮೂರು ವರ್ಷದಿಂದ ವಾಸವಿದ್ದಳು. ಅಡಕಮಾರನಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಾವಿಗೆ ದೆವ್ವ, ಗಾಳಿಯ ಶಂಕೆ ಎಂದು ಕುಟುಂಬ ಹಾಗೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

loader