ಇಂದಿರಾ ನಗರದ ನಿವಾಸಿಯಾದ ಇವರು ತನ್ನ ಗಂಡ ರಾತ್ರಿ ವೇಳೆ ಮೇಕಪ್ ಮಾಡಿಕೊಂಡು ನನ್ನ ಸೇರೆಗಳನ್ನು ಧರಿಸಿಕೊಂಡು ಮಹಿಳೆಯಂತೆ ವರ್ತಿಸುತ್ತೇನೆ.

ಬೆಂಗಳೂರು(ಡಿ.28): ರಾತ್ರಿ ವೇಳೆಯಲ್ಲಿ ನನ್ನ ಸೀರೆ ಧರಿಸುವ ನನ್ನ ಗಂಡ ಹಗಲಿನಲ್ಲಿ ಟಿಪ್'ಟಾಪಾಗಿ ಡ್ರಸ್ ಮಾಡಿಕೊಂಡು ಐಟಿ ಕಂಪನಿಯಲ್ಲಿ ಸಾಫ್ಟ್'ವೇರ್ ಇಂಜಿನಿಯರ್ ಕೆಲಸಕ್ಕೆ ಹೋಗುತ್ತಾನೆ ಎಂದು ತನ್ನ ಪತಿಯ ನಡವಳಿಕೆಯ ವಿರುದ್ಧ ಬೇಸತ್ತಿರುವ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

29 ವರ್ಷದ ಸಾಪ್ಟ್ವೇರ್ ಇಂಜಿನಿಯರ್ ಗಂಡನ ವಿರುದ್ದ ದೂರು ನೀಡಿದ ಮಹಿಳೆ. ಇಂದಿರಾ ನಗರದ ನಿವಾಸಿಯಾದ ಇವರು ತನ್ನ ಗಂಡ ರಾತ್ರಿ ವೇಳೆ ಮೇಕಪ್ ಮಾಡಿಕೊಂಡು ನನ್ನ ಸೇರೆಗಳನ್ನು ಧರಿಸಿಕೊಂಡು ಮಹಿಳೆಯಂತೆ ವರ್ತಿಸುತ್ತೇನೆ. ತಮ್ಮಿಬ್ಬರಿಗೂ ಒಂದು ವರ್ಷದ ಹಿಂದೆ ಮದುವೆ ಆಗಿದು ವಿವಾಹವಾದ ಮೊದಲ ದಿನದಿಂದಲೂ ತನ್ನ ಪತಿರಾಯ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಇಂದಿರಾ ನಗರ ಪೊಲೀಸರಿಗೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ದಂಪತಿಗಳಿಬ್ಬರೂ ಟೆಕ್ಕಿಗಳು. ಅದಲ್ಲದೆ ವನಿತಾ ಸಹಾಯ ವಾಣಿಯಲ್ಲಿ ಇಬ್ಬರಿಗೂ ಕೌನ್ಸಿಲಿಂಗ್ ಅಗಿದೆ. ಗಂಡನ ವಿಚಿತ್ರ ನಡವಳಿಕೆಗೆ ಬೇಸತ್ತು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪತಿರಾಯ ವಿಚ್ಚೇದನಕ್ಕೆ ಸಮ್ಮತಿ ನೀಡಿದ್ದಾನೆ.