10ನೇ ತಾರೀಖು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಶ್ರಿರಾಂಪುರದ ತನ್ನ ಮನೆಯಿಂದ ಅರುಣ್​ ಕೆಲಸಕ್ಕೆ ಹೋಗಿದ್ದನ್ನ ನೋಡಿದ್ದಾನೆ. ಬಳಿಕ ಸುರೇಶ್​​ ಸೀದಾ ಅರುಣ್​ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿ  ಮಲಗಿದ್ದ ಅರುಣ್​ ಪತ್ನಿ ಸುಧಾಗೆ ಪೆಪ್ಪರ್​ ಸ್ಪ್ರೆ ಯಿಂದ ಹೊಡೆದಿದ್ದಾನೆ.

ಬೆಂಗಳೂರು(ಏ.14): ಇಂಥಾ ನೀಚ ಕೃತ್ಯ ಮಾಡಿದ್ದು ಸುರೇಶ್​ ಆಲಿಯಾಸ್​​ ಡೆಲ್ಲಿ ಎಂಬಾತ. ಪರರ ಸಂಗ ಮಾಡಿದ ಈತ ಸಿಲಿಕಾನ್​ ಸಿಟಿಯಲ್ಲಿ ಪಿಂಪ್​ ಕೆಲಸ ಮಾಡಿಕೊಂಡು ಗಲ್ಲಿ ಗಲ್ಲಿ ಅಲೆಯುತ್ತಿದ್ದ.

ಮಸಾಜ್​ ಪಾರ್ಲರ್​​ ಮೂಲಕ ದಂಧೆ ಮಾಡಲು ಸ್ಕೆಚ್​​ ಹಾಕಿದ್ದ. ಈತನ ಪಕ್ಕದ ಮನೆಯ ಅರುಣ್​​ ಎಂಬುವರ ಬಳಿ 6 ಲಕ್ಷ ಹಣ ಕೇಳಿದ್ದಾನೆ. ಆದರೆ, ಸ್ನೇಹಿತ ಅರುಣ್​​, ಮಸಾಜ್​ ಪಾರ್ಲರ್​​ ತೆರೆಯಲು ಹಣ ಕೋಡೋದಿಲ್ಲ ಅಂತ ಹೇಳಿದ್ದಾನೆ. ಇದರಿಂದ ಕೋಪಗೊಂಡ ಸುರೇಶ್, 10ನೇ ತಾರೀಖು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಶ್ರಿರಾಂಪುರದ ತನ್ನ ಮನೆಯಿಂದ ಅರುಣ್​ ಕೆಲಸಕ್ಕೆ ಹೋಗಿದ್ದನ್ನ ನೋಡಿದ್ದಾನೆ. ಬಳಿಕ ಸುರೇಶ್​​ ಸೀದಾ ಅರುಣ್​ ಮನೆಗೆ ನುಗ್ಗಿದ್ದಾನೆ. ಮನೆಯಲ್ಲಿ ಮಲಗಿದ್ದ ಅರುಣ್​ ಪತ್ನಿ ಸುಧಾಗೆ ಪೆಪ್ಪರ್​ ಸ್ಪ್ರೆ ಯಿಂದ ಹೊಡೆದಿದ್ದಾನೆ. ಅಲ್ಲದೇ ಕೊರಳಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾನೆ. ಈತನ ಕೃತ್ಯಕ್ಕೆ ಸುಧಾ ವಿರೋಧ ವ್ಯಕ್ತಪಡಿಸಿದಾ ಮಾಂಗಲ್ಯ ಸರವನ್ನ ಕಿತ್ತುಕೊಂಡು ತನ್ನ ಎರಡು ಕೈಗಳಿಂದ ಆಕೆಯ ಕಣ್ಣಿನ ಗುಡ್ಡೆಗಳನ್ನ ತೆಗೆಯಲು ಮುಂದಾಗಿದ್ದಾನೆ. ಸುಧಾ ಕಿರುಚುತ್ತಿದ್ದಂತೆ ಸುರೇಶ್​​ ಪರಾರಿಯಾಗಿದ್ದಾನೆ.

ಈ ಘಟನೆಯ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರಣಾಂತಿಕ ಹಲ್ಲೆಗೊಳಗಾದ ಮಹಿಳೆಯ ಬಲಕಣ್ಣಿಗೆ ನಾರಾಯಣ ನೇತ್ರಾಲಯದಲ್ಲಿ ಮೇಜರ್​ ಸರ್ಜರಿ ಮಾಡಿದ್ದಾರೆ. ವೈದ್ಯರು ಹೇಳಿರೋ ಪ್ರಕಾರ ಸುಧಾ ಬಲಗಣ್ಣು ಇನ್ಮುಂದೆ ಕಾಣಿಸುವುದು ಅಷ್ಟಕಷ್ಟೆ ಅಂತ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)