Asianet Suvarna News Asianet Suvarna News

ಛಲದ ಇನ್ನೊಂದು ಹೆಸರು ಶಿರಸಿಯ ಗೌರಿ ನಾಯಕ್

ಹೆಸರು ಗೌರಿ ನಾಯಕ್​. ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರ. ಇವರಿಗೆ 6 ಗುಂಟೆ ತೋಟ ಇದೆ. ಅದಕ್ಕೆ ನೀರು ಬೇಕು ಅನ್ನಿಸಿದಾಗ, ತಾವೇ ಸಲಕರಣೆ ಹಿಡಿದು 60 ಅಡಿ ಬಾವಿ ತೋಡಿದರು.

Women Achievers Award Gowri Nayak

ಮನಸ್ಸೊಂದಿದ್ರೆ ಬೆಟ್ಟವನ್ನು ಬೇಕಾದ್ರೂ ಬಾಗಿಸಬಹುದು. ಛಲವೊಂದಿದ್ರೆ ತಿರುಗೋ ಭೂಮಿಯನ್ನೂ ನಿಲ್ಲಿಸಬಹುದು. ನೀರೇ ಇಲ್ಲದ ನೆಲದಲ್ಲಿ ನೀರು ಜಿನುಗುವಂತೆ ಮಾಡಬಹುದು ಅನ್ನೋದಕ್ಕೆ ಈ ಆಧುನಿಕ ಭಗೀರಥಿನೇ ಸಾಕ್ಷಿ..

ಹೆಸರು ಗೌರಿ ನಾಯಕ್​. ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರ. ಇವರಿಗೆ 6 ಗುಂಟೆ ತೋಟ ಇದೆ. ಅದಕ್ಕೆ ನೀರು ಬೇಕು ಅನ್ನಿಸಿದಾಗ, ತಾವೇ ಸಲಕರಣೆ ಹಿಡಿದು 60 ಅಡಿ ಬಾವಿ ತೋಡಿದರು.

ಒಂದಡಿ ಆಳ ತೋಡೋದಕ್ಕೆ ಅಬ್ಬಬ್ಬಾ ಅಂತಾರೆ ಜನ. ಅಂಥಾದ್ರಲ್ಲಿ 60 ಅಡಿ ಆಳದ ಬಾವಿಯನ್ನ ಒಬ್ಬರೇ ತೋಡಿ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ ಗೌರಿ ನಾಯಕ್. ಪಾತಾಳದಿಂದ ಗಂಗೆ ಉಕ್ಕಿ ಬರೋವರೆಗೂ ಬಿಡದೇ, ಮಕ್ಕಳ ಸಹಾಯವನ್ನೂ ಪಡೆಯದೇ ದಿಟ್ಟತನ ಮೆರೆದ ಸಾಧಕಿ 51 ವರ್ಷದ ಗೌರಿ ನಾಯಕ್​​ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ಮಹಿಳಾ ಪ್ರಶಸ್ತಿಯ ತೀರ್ಪುಗಾರರ ವಿಶೇಷ ಗೌರವಕ್ಕೆ ಆಯ್ಕೆಯಾಗಿದ್ದಾರೆ.

Follow Us:
Download App:
  • android
  • ios