ಬ್ಯಾಂಕಾಕ್(ಅ.07): ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಕ್ಷಣ ಮಾತ್ರದಲ್ಲಿ ಧಾರುಣವಾಗಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳ ಆತ್ಮವು ದೇಹವನ್ನು ತ್ಯಾಗ ಮಾಡುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾನವ ಸತ್ತ ಮೇಲೆ ಆತನ ಆತ್ಮ ದೇಹವನ್ನು ಬಿಟ್ಟು ಹೊಗುತ್ತದೆ ಎಂಬ ವಾದಕ್ಕೆ ಪುಷ್ಠಿಕೊಡುವಂತೆ ಇದೆ ಈ ವಿಡಿಯೋ, ಬೈಕ್ ಕಾರಿಗೆ ಗುದ್ದಿದ ರಭಸಕ್ಕೆ ರಸ್ತೆಯ ಪಕ್ಕಕ್ಕೆ ಹಾರಿ ಬಿದ್ದ ಮಹಿಳೆ, ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸ್ಥಳದಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಮಹಿಳೆ ಪ್ರಾಣ ಹೋದ ನಂತರ ಆಕೆಯ ದೇಹದಿಂದ ಆತ್ಮ ಹೊರ ಬರುವ ದೃಶ್ಯವು ರೆಕಾರ್ಡ್ ಆಗಿದೆ.