ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸಯಕಲ್ ರಿಕ್ಷಾದಲ್ಲಿ ಕೊಂಡೊಯ್ದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್’ನಲ್ಲಿ ನಡೆದಿದೆ. ಈ ರೀತಿ ಶವವನ್ನು ಕೊಂಡೊಯ್ದದ್ದು ಬೇರಾರೂ ಅಲ್ಲ, ಖದ್ದು ಸರ್ಕಾರಿ ರೈಲ್ವೇ  ಪೊಲೀಸರು!.

ಫಿರೋಝಾಬಾದ್, ಉತ್ತರ ಪ್ರದೇಶ (ಜು.02): ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸಯಕಲ್ ರಿಕ್ಷಾದಲ್ಲಿ ಕೊಂಡೊಯ್ದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್’ನಲ್ಲಿ ನಡೆದಿದೆ.

ಈ ರೀತಿ ಶವವನ್ನು ಕೊಂಡೊಯ್ದದ್ದು ಬೇರಾರೂ ಅಲ್ಲ, ಖದ್ದು ಸರ್ಕಾರಿ ರೈಲ್ವೇ ಪೊಲೀಸರು! (ಜಿಆರ್’ಪಿ).

ರೈಲಿ ಢಿಕ್ಕಿ ಹೊಡೆದು ಮಹಿಳೆಯೊಬ್ಬಳು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ, ಸೈಕಲ್ ರಿಕ್ಷಾದಲ್ಲಿ ಸಾಗಿಸಲಾಗಿದೆ.

ನಾನು ಕೆಳ ಶ್ರೇಣಿಯ ಅಧಿಕಾರಿಯಾಗಿರುವುದರಿಂದ ನಾನು ಆ ರೀತಿ ಸಾಗಿಸಬೇಕಾಯಿತು, ಹಿರಿಯ ಅಧಿಕಾರಿಗಳು ಈ ಕುರಿತು ಹೆಚ್ಚಿಗೆ ಬಲ್ಲರು, ಎಂದು ಘಟನೆಗೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಅಧಿಕಾರಿ ಹೇಳಿದ್ದಾರೆ.

ಫೋಟೋ: ಏಎನ್ಐ