ನೀರು ಆಕೆಯ ಗಂಟಲಿನೊಳಗೆ ಹೋಗುತ್ತಿದ್ದಂತೆ ಚರ್ಮದ ಮೇಲೆ ಬೊಬ್ಬೆಗಳಾಗುತ್ತವೆ. ನೀರಿನಲ್ಲಿ ಮಿಯ್ಯುವವರನ್ನು ಕಂಡರೂ ಆಕೆಗೆ ಕಿರಿಕಿರಿ. ಒಂದು ವೇಳೆ ನೀರಿನೊಳಗೆ ರಶೆಲ್ ತನ್ನ ಕಾಲನ್ನು ಇಟ್ಟರೆ, ಸುಟ್ಟ ಗಾಯವಾದಷ್ಟು ನೋವಾಗುತ್ತದೆ ಎಂದು ಸ್ವತಃ ಎಂದು ಆಕೆಯೇ ಹೇಳಿಕೊಂಡಿದ್ದಾರೆ.
ಲಂಡನ್: ಭೂಮಿಯ ಮೇಲಿರುವ ಜೀವಿಗಳು ಊಟ ಬಿಟ್ಟಾದರೂ ಇರಬಹುದು. ಆದರೆ, ನೀರು ಕುಡಿಯದೆ ಮಾತ್ರ ಜೀವಿಸಲು ಸಾಧ್ಯವೇ ಇಲ್ಲ. ಅದ್ದರಿಂದಲೇ ನೀರನ್ನು ‘ಜೀವಜಲ’ ಎನ್ನಲಾಗುತ್ತದೆ. ಆದರೆ, ಜರ್ಮನಿ ಮೂಲದ ಮಹಿಳೆ ರಶೆಲ್ ವಾರ್ವಿಕ್ ಅವರಿಗೆ ಮಾತ್ರ ನೀರು ಅಂದರೇನೆ ಹೆದರಿಕೆ. ಅದು ಬಿಡಿ, ಕಣ್ಣೀರು ಬಂದರೆ, ಇಡೀ ಕೆನ್ನೆಯೇ ಬಿಂಕಿಯಲ್ಲಿ ಸುಟ್ಟಂತಾಗುತ್ತದೆ.
ನೀರು ಆಕೆಯ ಗಂಟಲಿನೊಳಗೆ ಹೋಗುತ್ತಿದ್ದಂತೆ ಚರ್ಮದ ಮೇಲೆ ಬೊಬ್ಬೆಗಳಾಗುತ್ತವೆ. ನೀರಿನಲ್ಲಿ ಮಿಯ್ಯುವವರನ್ನು ಕಂಡರೂ ಆಕೆಗೆ ಕಿರಿಕಿರಿ. ಒಂದು ವೇಳೆ ನೀರಿನೊಳಗೆ ರಶೆಲ್ ತನ್ನ ಕಾಲನ್ನು ಇಟ್ಟರೆ, ಸುಟ್ಟ ಗಾಯವಾದಷ್ಟು ನೋವಾಗುತ್ತದೆ ಎಂದು ಸ್ವತಃ ಎಂದು ಆಕೆಯೇ ಹೇಳಿಕೊಂಡಿದ್ದಾರೆ. ‘‘ಉಷ್ಣವಲಯದ ಸಮುದ್ರ ತೀರದಲ್ಲಿ ಜೀವಿಸುವವರಿಗೆ ದುಃಸ್ವಪ್ನದಿಂದ ಹೊರಬರಲು ಮತ್ತು ದಣಿವಾರಿಸಿಕೊಳ್ಳಲು ಈಜುವುದು ಒಂದು ರೀತಿಯ ಚಿಕಿತ್ಸೆ. ಆದರೆ, ಇಂಥ ಆಲೋಚನೆಗಳು ನನ್ನಲ್ಲಿ ಬಂದರೆ, ಅದು ನರಕ ಎನಿಸುತ್ತದೆ,’’ ಎಂದು ರಶೆಲ್ ತನ್ನ ಅಳಲು ತೋಡಿಕೊಂಡಿದ್ದಾರೆ. ಈ ವಿಚಿತ್ರದ ಬಗ್ಗೆ ‘ಬಿಬಿಸಿ’ ವರದಿ ಮಾಡಿದೆ.
ಸ್ವಾಭಾವಿಕವಾಗಿ ಮೈಯಿಂದ ಉತ್ಪತ್ತಿಯಾಗುವ ಬೆವರಿನ ಹನಿ ಮೈಮೇಲೆ ಇದ್ದಾಗಲೂ ಹೆಚ್ಚಾಗಿ ಬಾಧಿಸುತ್ತದೆ. ಅಲ್ಲದೆ, ಇದರಿಂದ ಕೆಲವು ಗಂಟೆ ಕಾಲ ತುರಿಕೆಯಾಗುತ್ತದೆ. ಆದರೆ, ಬೆವರು ರಶೆಲ್‌ಳನ್ನು ಸುಡುತ್ತದೆ! ‘‘ನಾನೊಂದು ವೇಳೆ ಮಾರಥ್ಯಾನ್‌ನಲ್ಲಿ ಓಟಕ್ಕಿಳಿದೆ ಎಂದಿಟ್ಟುಕೊಳ್ಳಿ. ನಾನು ಸ್ವಲ್ಪ ದೂರ ಹೋಗುತ್ತಲೆ ತಟ್ಟನೆ ವಿಶ್ರಾಂತಿ ಪಡೆಯಬೇಕು. ಇಲ್ಲವಾದರೆ, ನನ್ನ ಬೆವರು ನನ್ನನ್ನು ಹಿಂಸಿಸಿಬಿಡುತ್ತದೆ. ಆ ಹಿಂಸೆಯಿಂದ ನಾನು ಅಳುವಂತೆಯೂ ಇಲ್ಲ. ಅತ್ತಾಗ ಸುರಿಯುವ ಕಣ್ಣೀರು ನನ್ನ ಮುಖವನ್ನು ಬೆಂಕಿಯಲ್ಲಿ ಸುಟ್ಟಂತೆ ಊದಿಸುತ್ತದೆ,’’ ಎಂದು ಹೇಳಿಕೊಳ್ಳುತ್ತಾರೆ.
ನೀರು ಸೇವಿಸದೆ ಬದುಕಿದ್ದು ಹೇಗೆ?: ಮನುಷ್ಯನ ದೇಹ ಶೇ.60ರಷ್ಟು ನೀರಿನಿಂದ ಆವರಿಸಿರುತ್ತದೆ. ಆದರೆ, ದೇಹದಲ್ಲಿರುವ ನೀರಿನ ಅಂಶದಿಂದ ಆಕೆಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಆದರೆ, ನೀರಿನ ಅಂಶಗಳು ಚರ್ಮಕ್ಕೆ ಸೋಕಿದಾಗ ರಸಾಯನಿಕ ಕ್ರಿಯೆ ಉಂಟಾಗಿ ರಶೆಲ್‌ಗೆ ಚರ್ಮ ಸುಟ್ಟ ಅನುಭವವಾಗುತ್ತಿದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯ ಈ ಕಾಯಿಲೆಗೆ ಅಲರ್ಜಿ ಖಂಡಿತವಾಗಿಯೂ ಕಾರಣವಲ್ಲ ಎಂದು ವೈದ್ಯರು ಹೇಳಿದ್ದಾರೆ.
(ಕೃಪೆ: ಕನ್ನಡಪ್ರಭ)
