ಕ್ಯಾನ್‌ಬೆರಾ[ಅ.06]: ಸಾಮಾನ್ಯವಾಗಿ ಮದುವೆಯಲ್ಲಿ ಧರಿಸಿದ ಉಡುಗೆಯನ್ನು ಮತ್ತೊಮ್ಮೆ ಧರಿಸುವುದು ತೀರಾ ಕಡಿಮೆ. ಆದರೂ ಮನೆಯಲ್ಲಿ ಅದನ್ನು ಜೋಪಾನವಾಗಿ ಕಾಯ್ದಿಡುತ್ತೇವೆ.

ಆದರೆ, ಆಸ್ಪ್ರೇಲಿಯಾದ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧ. ಟಮ್ಮಿ ಹಾಲ್‌ ಎಂಬಾಕೆ ದಿನ ನಿತ್ಯವೂ ಮದುವೆ ಉಡುಗೆಯನ್ನೇ ಧರಿಸುತ್ತಾಳೆ. ಮದುವೆಯ ಉಡುಗೆಯಲ್ಲೇ ಜಿಮ್‌, ಶಾಪಿಂಗ್‌ ಮಾಲ್‌ಗೆ ಹೋಗುತ್ತಾಳೆ.

ದುಬಾರಿ ಹಣ ಕೊಟ್ಟು ಕೊಂಡುಕೊಳ್ಳುವ ಮದುವೆ ಉಡುಗೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವ ಬದಲು ಅದನ್ನು ಪ್ರದರ್ಶಿಸಬೇಕು ಎಂಬದು ಆಕೆಯ ಆಸೆಯಂತೆ.