ಹೆಚ್ಚಾದ ಎಟಿಎಂ ದೋಖಾ ಪ್ರಕರಣಗಳು; ಕಳ್ಳಿ ಹಣ ಡ್ರಾ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

First Published 23, Jun 2018, 4:53 PM IST
Woman Thief Withdraws Money From  ATM Caught in CCTV
Highlights
  • ಎಟಿಎಂ ಎಗರಿಸಿ ಹಣ ಡ್ರಾ ಮಾಡಿಕೊಂಡಿರೋ ಖತರ್ ರ್ನಾಕ್ ಕಳ್ಳರು
  • ಎಟಿಎಂ ನಲ್ಲಿದ್ದ 60 ಸಾವಿರ ಹಣ ಕಳೆದುಕೊಂಡ ರೀನಾ ಎಂಬ ಮಹಿಳೆ

ಹಾಸನ: ಅಮಾಯಕರನ್ನು ಯಾಮಾರಿಸಿ ಇಲ್ಲವೇ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡುವ ಪ್ರಕರಣಗಳು ಹಾಸನ ಜಿಲ್ಲೆಯಲ್ಲೂ ಹೆಚ್ಚಾಗ ತೊಡಗಿವೆ.  ಮಹಿಳೆಯೊಬ್ಬರು ಕಳ್ಳರ ಕೈ ಚಳಕದಿಂದ  60 ಸಾವಿರ ಕಳೆದುಕೊಂಡಿದ್ದಾರೆ. ಹಾಸನದ  ರೀನಾ ,ಹಣ ಕಳೆದುಕೊಂಡ ಮಹಿಳೆ. ಇವರ ಅಕೌಂಟ್ ನಿಂದ 60  ಸಾವಿರ ಹಣ ಮಾಯವಾಗಿದೆ. 

"

ಜೂನ್ 16 ರಂದು ಹಾಸನದಿಂದ ಮಡಿಕೇರಿಗೆ ತೆರಳುವ ವೇಳೆ ಜನರ ನೂಕುನುಗ್ಗಲು ವೇಳೆ ಕಳ್ಳರು, ರೀನಾ ಅನ್ನೋ ಮಹಿಳೆಯ ಪರ್ಸ್ ಎಗರಿಸಿದ್ದಾರೆ. ವಿಪರ್ಯಾಸ ಎಂದ್ರೆ ರೀನಾ  ಪರ್ಸ್ ನಲ್ಲೆ ಒಂದು ಕಡೆ ಎಟಿಎಂ ನಂಬರ್ ಸಹ ಬರೆದಿಟ್ಟಿದ್ದರು. ಲಾಡು ಬಂದು ಬಾಯಿಗೆ ಬಿತ್ತು ಅನ್ನೋ ಹಾಗೆ, ಅದೇ ದಿನ ಸಂಜೆ ಬಿಎಂ ರಸ್ತೆಯಲ್ಲಿರುವ ಬ್ಯಾಂಕ್ ಇಂಡಿಯಾ ಎಟಿಎಂ ನಿಂದ 40 ಸಾವಿರ, ಮಾರನೇ ದಿನ ಕೆರೂರು ವೈಶ್ಯ ಬ್ಯಾಂಕ್ ಎಟಿಎಂ ನಲ್ಲಿ 20 ಸಾವಿರ ಡ್ರಾ ಮಾಡಿದ್ದಾರೆ. 

ಎಟಿಎಂ ನಿಂದ ಹಣ ಡ್ರಾ ಮಾಡಿಕೊಂಡಿರುವುದು ಓರ್ವ ಮಹಿಳೆ. ಅನಕ್ಷರಸ್ಥ ಮಹಿಳೆಯಂತೆ ಆಕೆ ಸಿಸಿಟಿವಿ ದೃಶ್ಯ ದಲ್ಲಿ ಕಾಣಿಸುತ್ತಿದ್ದಾಳೆ. ಎಟಿಎಂ ನಲ್ಲಿ ಆಕೆ ಕದ್ದ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಂಬಂಧ ಹಾಸನ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆದ್ರೆ ಆಕೆಯ ಗುರುತು ಪತ್ತೆಯಾಗಿಲ್ಲ.

loader