ಹೈದರಾಬಾದ್[ಫೆ.02]: ಪದೇ ಪದೇ ಕಾಡಿಸುತ್ತಿದ್ದ ಬಡಗಿಯೊಬ್ಬನನ್ನು ಮಹಿಳಾ ಟೆಕ್ಕಿಯೊಬ್ಬಳು ತನ್ನ ಸ್ನೇಹಿತರ ಜೊತೆಗೂಡಿ ಅಪಹರಿಸಿ, ಥಳಿಸಿದ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ. ವಿಚಿತ್ರವೆಂದರೆ ಹೀಗೆ ಥಳಿಸಿದ್ದಕ್ಕಾಗಿ ಆಕೆಯ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಟೆಕ್ಕಿಯ ನಂಬರ್ ಅನ್ನು ಅದು ಹೇಗೋ ಪಡೆದುಕೊಂಡಿದ್ದ ಬಡಗಿ, ಪದೇ ಪದೇ ಆಕೆಯನ್ನು ಹಿಂಬಾಲಿಸುವುದು, ಆಕೆಗೆ ಮೆಸೇಜ್ ಮಾಡುವುದು ಮಾಡುತ್ತಿದ್ದ. ಇದರಿಂದ ಬೇಸತ್ತ ಟೆಕ್ಕಿ, ಇತ್ತೀಚೆಗೆ ಕಾಲೇಜು ಬಳಿ ಮಾತನಾಡಲು ಬರಹೇಳಿದ್ದಳು. ಅಲ್ಲಿಗೆ ಬರುತ್ತಲೇ, ತನ್ನ ಸ್ನೇಹಿತರ ಜೊತೆಗೂಡಿ ಥಳಿಸಿದ ಆಕೆ, ಬಡಗಿಯನ್ನು ಅಪಹರಿಸಿದ್ದಾಳೆ.

ಈ ವೇಳೆ ಟೆಕ್ಕಿಯ ತಂಡದಿಂದ ಬಚಾವ್ ಆಗಿ ತಪ್ಪಿಸಿಕೊಂಡ ಬಡಗಿ, ಪೊಲೀಸರಿಗೆ ದೂರು ನೀಡಿದ್ದ. ಈ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.