ಹೆರಿಗೆ ಬೇನೆ ಕಾಣಿಸಿಕೊಂ ಹಿನ್ನೆಲೆಯಲ್ಲಿ  ಗರ್ಭೀಣಿ ಪತ್ನಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಭರದಲ್ಲಿ ವ್ಯಕ್ತಿಯೊಬ್ಬನ ಕಾರು ಮಹಿಳೆಯ ಐಷಾರಾಮಿ ಆಡಿ ಕಾರಿಗೆ ತಾಗಿದೆ. ಅದರಿಂದ ಕುಪಿತಳಾದ ಆಡಿ ಕಾರಿನ ಮಾಲಕಿ ಬಂದು ಈತನ ಕಾರಿನ ಕೀಯನ್ನು ಕಸಿದುಕೊಂಡಿದ್ದಾಳೆ.

ತನ್ನ ಕಾರಿಗೆ ಇನ್ನೊಂದು ಕಾರು ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು, ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ಗರ್ಭಿಣಿಯಿರುವ ಕಾರನ್ನು ತಡೆದು ನಿಲ್ಲಿಸಿದ ಅಮಾನುಷ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್’ ಬಳಿ ನಡೆದಿದೆ.

ಹೆರಿಗೆ ಬೇನೆ ಕಾಣಿಸಿಕೊಂ ಹಿನ್ನೆಲೆಯಲ್ಲಿ ಗರ್ಭೀಣಿ ಪತ್ನಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಭರದಲ್ಲಿ ವ್ಯಕ್ತಿಯೊಬ್ಬನ ಕಾರು ಮಹಿಳೆಯ ಐಷಾರಾಮಿ ಆಡಿ ಕಾರಿಗೆ ತಾಗಿದೆ. ಅದರಿಂದ ಕುಪಿತಳಾದ ಆಡಿ ಕಾರಿನ ಮಾಲಕಿ ಬಂದು ಈತನ ಕಾರಿನ ಕೀಯನ್ನು ಕಸಿದುಕೊಂಡಿದ್ದಾಳೆ.

ಪಕ್ಕದ ಸೀಟಿನಲ್ಲಿ ಆತನ ಗರ್ಭವತಿ ಪತ್ನಿ ಹೆರಿಗೆ ನೋವಿನಿಂದ ಒದ್ದಾಡುತ್ತಿರುವುದನ್ನು ತೋರಿಸಿ, ಪರಿಪರಿಯಾಗಿ ಬೇಡಿಕೊಂಡರೂ ಆಕೆ ಕೀ ನೀಡಲು ಒಪ್ಪಲಿಲ್ಲ. ಸ್ಥಳದಲ್ಲಿ ಜಮಾಯಿಸಿದ ಜನರು ಕೂಡಾ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ, ಆದರೂ ಆ ಐಷಾರಾಮಿ ಕಾರಿನ ಮಾಲಕಿ ಕೀ ಕೋಡಲು ಸುತರಾಂ ಒಪ್ಪಲಿಲ್ಲ. ಸ್ಥಳಕ್ಕೆ ಧಾವಿಸಿದ ಪೊಲೀಸರೂ ಕೂಡಾ ಪರಿಸ್ಥಿಯನ್ನು ನೋಡಿಕೊಂಡು ಕೀ ಕೊಡಲು ಮನವಿ ಮಾಡಿದರೂ ಆ ಮಹಿಳೆಯ ಮನವು ಎಳ್ಳಷ್ಟು ಕರಗಲಿಲ್ಲ. ಕೊನೆಗೆ ಜನರು ಆಕ್ರೋಶ ಹೆಚ್ಚಾಗುತ್ತಿದ್ದಂತೆ ಆಕೆ ವಿಚಲಿತಳಾಗಿ ಕೀ ಕೊಡಲು ಒಪ್ಪಿದರೂ, ಕೀಯನ್ನು ಕೈಗೆ ಕೊಡದೇ ನೆಲದ ಮೇಲೆ ಬಿಸಾಕಿದ್ದಾಳೆ. ಈ ಎಲ್ಲಾ ಬೆಳವಣಿಗೆಗಳು ಮೊಬೈಲ್’ನಲ್ಲಿ ಚಿತ್ರಿಕರಣಗೊಂಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.