ಕೆಲವೇ ದಿನಗಳ ಹಿಂದೆ ATM ಎದುರು ಸರತಿ ಸಾಲಿನಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಯುವಕ, ಯುವತಿ ಪ್ರೀತಿಯಲ್ಲಿ ಬಿದ್ದು, ಅಲ್ಲೇ ಮದುವೆಯಾದ ವಿಚಿತ್ರ ಘಟನೆ ಭಾರೀ ಸದ್ದು ಮಾಡಿತ್ತು. ಆದರೀಗ ಮಹಾರಾಷ್ಟ್ರದಲ್ಲಿ ಇದರ ತದ್ವಿರುದ್ಧ ಘಟನೆ ನಡೆದಿದ್ದು, ಬ್ಯಾಂಕ್ ಎದುರು ಕಾಯುತ್ತಿದ್ದ ಮಾಜಿ ಪ್ರೇಮಿಗಳು ಅಲ್ಲೇ ಹೊಡೆದಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಬ್ಯಾಂಕ್ ಒಂದರ ಎದುರು ತನ್ನ ಸರತಿಗಾಗಿ ಕಾಯುತ್ತಿದ್ದ 35ವರ್ಷದ ಯುವಕನೊಬ್ಬ ಸದ್ಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಯಾವ ಘಳಿಗೆಯಲ್ಲಿ ನಾನು ಬ್ಯಾಂಕ್'ಗೆ ಹೋಗುವ ನಿರ್ಧಾರ ಮಾಡಿದೆ ಎಂದು ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಸರತಿ ಸಾಲಿನಲ್ಲಿ ಕಾಯುತ್ತಿದ್ದ ಈತನಿಗೆ ಮಾಜಿ ಪ್ರಿಯತಮೆಯೇ ವಿಲನ್ ಆಗಿದ್ದು, ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ.
ಮುಂಬೈ(ನ.25): ಕೆಲವೇ ದಿನಗಳ ಹಿಂದೆ ATM ಎದುರು ಸರತಿ ಸಾಲಿನಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಯುವಕ, ಯುವತಿ ಪ್ರೀತಿಯಲ್ಲಿ ಬಿದ್ದು, ಅಲ್ಲೇ ಮದುವೆಯಾದ ವಿಚಿತ್ರ ಘಟನೆ ಭಾರೀ ಸದ್ದು ಮಾಡಿತ್ತು. ಆದರೀಗ ಮಹಾರಾಷ್ಟ್ರದಲ್ಲಿ ಇದರ ತದ್ವಿರುದ್ಧ ಘಟನೆ ನಡೆದಿದ್ದು, ಬ್ಯಾಂಕ್ ಎದುರು ಕಾಯುತ್ತಿದ್ದ ಮಾಜಿ ಪ್ರೇಮಿಗಳು ಅಲ್ಲೇ ಹೊಡೆದಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಬ್ಯಾಂಕ್ ಒಂದರ ಎದುರು ತನ್ನ ಸರತಿಗಾಗಿ ಕಾಯುತ್ತಿದ್ದ 35ವರ್ಷದ ಯುವಕನೊಬ್ಬ ಸದ್ಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಯಾವ ಘಳಿಗೆಯಲ್ಲಿ ನಾನು ಬ್ಯಾಂಕ್'ಗೆ ಹೋಗುವ ನಿರ್ಧಾರ ಮಾಡಿದೆ ಎಂದು ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಸರತಿ ಸಾಲಿನಲ್ಲಿ ಕಾಯುತ್ತಿದ್ದ ಈತನಿಗೆ ಮಾಜಿ ಪ್ರಿಯತಮೆಯೇ ವಿಲನ್ ಆಗಿದ್ದು, ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ.
ಸೋಮವಾರದಂದು ಇಲ್ಲಿನ ತ್ರಂಬಕ್ ರಸ್ತೆಯಲ್ಲಿರುವ ಬ್ಯಾಂಕ್ ಒಂದರ ಎದುರು ಹಣ ವಿನಿಮಯ ಮಾಡಲು ಕ್ಯೂನಲ್ಲಿ ಕಾಯುತ್ತಿದ್ದ 35 ವರ್ಷದ ಯುವಕನನ್ನು ಆತನ 23 ವರ್ಷ ಪ್ರಾಯದ ಮಾಜಿ ಪ್ರೇಮಿ ನೋಡಿದ್ದಾಳೆ. ಇದಾದ ಬಳಿಕ ಮಾತ್ರ ನಡೆದದ್ದು ಮಾತ್ರ ಊಹಿಸಲೂ ಅಸಾಧ್ಯವಾದದ್ದು. ಯಾಕೆಂದರೆ ಅಲ್ಲಾಗಿದ್ದು ಪ್ರೇಮ ಸಲ್ಲಾಪವಲ್ಲ ಬದಲಾಗಿ ಮಿನಿ ಯುದ್ಧ.
ಅಲ್ಲಿ ನಡೆದ ಘಟನೆ ಕುರಿತಾಗಿ ಪೊಲೀಸರಿಗೆ ಹೇಳಿಕೆ ನೀಡಿದ ಮಹಿಳೆ 'ನಾನು ನನ್ನಲ್ಲಿದ್ದ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್'ಗೆ ಬಂದಿದ್ದೆ. ಈ ವೇಳೆ ನನಗೆ ಪರಿಚಯದ ಮುಖ ಕಂಡು ಬಂತು. ಆ ವ್ಯಕ್ತಿ ಬೇರಾರೂ ಆಗಿರದೆ ನಾಲ್ಕು ವರ್ಷದ ಹಿಂದೆ ನನಗೆ ಮೋಸ ಮಾಡಿದ್ದ ಮಾಜಿ ಪ್ರಿಯಕರನಾಗಿದ್ದ. ಆತನನ್ನು ನಾನು ನೋಡಿದ ಕೂಡಲೇ ನನ್ನ ತಂದೆ ಹಾಗೂ ಅಣ್ಣನಿಗೆ ಕರೆ ಮಾಡಿ ಕರೆಸಿಕೊಂಡೆ. ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಎದುರು ಬಂದ ಅವರು ಆತನಿಗೆ ಹಿಗ್ಗಾ ಮುಗ್ಗಾ ಥಳಿಸಿರು' ಎಂದಿದ್ದಾಳೆ.
ಮಹಿಳೆ ನೀಡಿದ ದೂರಿನನ್ವಯ ಆಕೆಯ ಮಾಜಿ ಪ್ರಿಯಕರನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸದ್ಯ ಗಾಯಗೊಂಡಿರುವ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
