ಉತ್ತರ ಪ್ರದೇಶದಲ್ಲಿ ಮನಕಲುಕುವ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬರೇಲಿ ಜಿಲ್ಲೆಯ ಮೀರ್ ಗಂಜ್ ಪ್ರದೇಶದಲ್ಲಿ ತನ್ನ ಗಂಡನ ಚಿಕಿತ್ಸೆಗಾಗಿ ಮಹಿಳೆಯೋರ್ವಳು ತನ್ನ 15 ದಿನದ ಹಸುಗೂಸನ್ನೇ 45 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. 

ಬರೇಲಿ (ಜ.2): ಉತ್ತರ ಪ್ರದೇಶದಲ್ಲಿ ಮನಕಲುಕುವ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬರೇಲಿ ಜಿಲ್ಲೆಯ ಮೀರ್ ಗಂಜ್ ಪ್ರದೇಶದಲ್ಲಿ ತನ್ನ ಗಂಡನ ಚಿಕಿತ್ಸೆಗಾಗಿ ಮಹಿಳೆಯೋರ್ವಳು ತನ್ನ 15 ದಿನದ ಹಸುಗೂಸನ್ನೇ 45 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. 

ಈ ಮಾತನಾಡಿರುವ ಆಕೆ ತನ್ನ ಪತಿಗೆ ಅನಾರೋಗ್ಯ ಕಾಡುತ್ತಿದ್ದು, ಚಿಕಿತ್ಸೆ ಕೊಡಿಸಲು ಹಣವಿಲ್ಲದ ಕಾರಣ ಮಗುವನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದಾರೆ.

ಬಡತನ ಹಿನ್ನೆಲೆ ಇರುವ ಕೆಲ ಕುಟುಂಬಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಬೆಳಕಿಗೆ ಬಾರದೆ ಉಳಿಯುತ್ತಿದೆ. 2017ರ ಮೇ ತಿಂಗಳಲ್ಲಿಯೂ ಕೂಡ ತ್ರಿಪುರಾದಲ್ಲಿ ಕೇವಲ 200 ರು.ಗೆ ಮಗುವನ್ನು ಮಾರಾಟ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿತ್ತು.

ಅದಾದ ಬಳಿಕ ಸೋಸಿಯಲ್ ವೆಲ್ಫೇರ್ ಹಾಗೂ ಸೋಸಿಯಲ್ ಎಜುಕೇಶನ್ ಇಲಾಖೆ ಮಗುವನ್ನು ವಾಪಸ್ ಕುಟುಂಬಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು.

Scroll to load tweet…