ಮಹಿಳೆ ಒಳ ಉಡುಪಿನಲ್ಲಿ ಸಿಕ್ಕಿದ್ದ ಚಿನ್ನವೆಷ್ಟು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 8:21 AM IST
Woman smuggling gold held at airport
Highlights

ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. 

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಕೋಟೆ ಕಣ್ಣು ತಪ್ಪಿಸಿ ಚಿನ್ನ ಸಾಗಾಣಿಕೆಗೆ ಯತ್ನಿಸಿದ್ದ  ಮೂವರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೆರೆ ಹಿಡಿದಿದ್ದು, ಅವರಿಂದ 2  ಕೆ.ಜಿ. ಚಿನ್ನ ವಶಪಡಿಸಿ ಕೊಂಡಿದ್ದಾರೆ. ದುಬೈಯಿಂದ ಸೋಮವಾರ ಆಗಮಿಸಿದ ಶಹೀದಾ ಬಾನು ಎಂಬಾಕೆಯನ್ನು ಕಸ್ಟಮ್ ಅಧಿಕಾರಿಗಳು, ವಿಮಾನ ನಿಲ್ದಾಣದಿಂದ ಹೊರ ಹೋಗುವಾಗ ಅನುಮಾನದ ಮೇರೆಗೆ ತಪಾ ಸಣೆ ನಡೆಸಿದ್ದರು. 

ಆಗ ಆಕೆಯ ಒಳ ಉಡುಪಿನಲ್ಲಿ ಅಡಗಿಸಿಟ್ಟು ಕೊಂಡಿದ್ದ 796  ಗ್ರಾಂ ಚಿನ್ನದ ಪುಡಿ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಮತ್ತಿಬ್ಬರು ದುಬೈನಿಂದ ಆಗಮಿಸಿದ ತಮಿಳುನಾಡು ಮೂಲದ ಪ್ರಯಾಣಿಕರು, ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಲೋಹ ಪರಿಶೋಧಕ ವೇಳೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 1,200 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

loader