Asianet Suvarna News Asianet Suvarna News

ಮಂಚಕ್ಕೆ ಬಾರದ ಸತಿ: ಹೆಣ್ಣೇ ಅಲ್ಲ ಅಂದ ಭೂಪತಿ!

ಮುಂಬೈನಲ್ಲಿ ನಡೀತೊಂದು ವಿಚಿತ್ರ ಘಟನೆ! ಎಷ್ಟು ಬಾರಿ ಕರೆದರೂ ಮಂಚಕ್ಕೆ ಬಾರದ ಪತ್ನಿ! ಪತ್ನಿ ಹಠದ ಕುರಿತು ಪೋಷಕರಿಗೆ ದೂರು ನೀಡಿದ ಪತಿ! ಬುದ್ದಿವಾದ ಹೇಳಿದ ಪೋಷಕರಿಗೆ ಸೊಸೆ ಮಾಡಿದ್ದೇನು?! ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳದ ದೂರು! ಸಂಧಾನಕ್ಕೆ ಮುಂದಾದ ಹುಡುಗನ ಮನೆಯವರಿಗೆ ಕಾದಿತ್ತು ಅಚ್ಚರಿ! ತಮ್ಮ ಸೊಸೆ ಹೆಣ್ಣೇ ಅಲ್ಲ ಎಂಬ ಅಚ್ಚರಿಯ ಸಂಗತಿ ಬಯಲಿಗೆ! ಸೊಸೆಯ ಜನ್ಮ ಪತ್ರದಲ್ಲಿ ಗಂಡು ಮಗು ಎಂದು ನಮೂದು! ಇದು ಹುಡುಗನ ಪೋಷಕರ ಕಳ್ಳಾಟ ಎಂದ ಯುವತಿ ಪೋಷಕರು

Woman Says Daughter-In-Law Refused Intimacy Turned Out To Be Male
Author
Bengaluru, First Published Nov 29, 2018, 6:35 PM IST

ಮುಂಬೈ(ನ.29): ಎಷ್ಟು ಬಾರಿ ಮಂಚಕ್ಕೆ ಕರೆದರೂ ಒಲ್ಲೆ ಎನ್ನುತ್ತಿದ್ದ ಪತ್ನಿ. ಸರಿ ಹನಿಮೂನ್ ಗೆ ಹೋದರೆ ಎಲ್ಲವೂ ಸರಿ ಹೋಗುತ್ತೆ ಅಂತಾ ಹೋದರೆ, ಅಲ್ಲಿಯೂ ಮುಟ್ಟಲು ಬಿಡದ ಹಠಮಾರಿ ಪತ್ನಿ.

ರೋಸಿ ಹೋದ ಪತಿ ಕಡೆಗೆ ತನ್ನ ಪೋಷಕರಲ್ಲಿ ಈ ವಿಷಯ ಹೇಳಿದ. ಏನೋ ಸೊಸೆಗೆ ಬೇಜಾರಾಗಿರಬಹುದು ಅಂತಾ ಬುದ್ದಿವಾದ ಹೇಳಲು ಹೊರಟರೆ ಪತಿ, ಅತ್ತೆ, ಮಾವ ಹೀಗೆ ಇಡೀ ಕುಟುಂಬದ ವಿರುದ್ಧವೇ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಹೀಗೆ ಸಿಕ್ಕ ಸಿಕ್ಕ ಕೇಸ್ ಗಳನ್ನೆಲ್ಲಾ ಜಡಿದಿದ್ದಾಳೆ ಈ ಮಹಿಳೆ.

ಅರೆ! ಪಾಪ ಬಹುಶಃ ಆ ಮಹಿಳೆಗೆ ಗಂಡನ ಮನೆಯಲ್ಲಿ ಅಷ್ಟೊಂದು ಕಷ್ಟ ಕೊಡುತ್ತಿರಬಹುದು ಅಂತಾ ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ ಆದೀತು. ಕಾರಣ ಆಕೆ ಮಹಿಳಯೇ ಅಲ್ಲ ಬದಲಿಗೆ ಪುರುಷ ಎಂಬ ಸಂಗತಿ ಗಂಡನ ಇಡೀ ಕುಟುಂಬವನ್ನೇ ದಿಗ್ಭ್ರಮೆಗೊಳಿಸಿದೆ.

ಹೌದು, ಇಂತದ್ದೊಂದು ವಿಚಿತ್ರ ಘಟನೆ ನಡೆದಿರುವುದು ಮುಂಬೈನಲ್ಲಿ. ಬೆಂಗಳೂರಿನಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿರುವ ವ್ಯಕ್ತಿ 2013 ರಲ್ಲಿ ಮಕ್ಕಳ ವೈದ್ಯೆಯಾಗಿದ್ದ ಮಹಿಳೆಯೊಂದಿಗೆ ಮದುವೆಯಾಗಿದ್ದರು. ಆದರೆ ಅಂದಿನಿಂದಲೂ ಪತ್ನಿ ತನ್ನ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಕೇಳಿದಾಗ ವೈದ್ಯೆ ಇಡೀ ಕುಟುಂಬದ ವಿರುದ್ದ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದಾಳೆ ಈ ಮಹಿಳೆ. ಇದಾದ ಬಳಿಕ ಪತಿಯ ಪೋಷಕರು ಮಹಿಳೆಯ ಪೋಷಕರೊಂದಿಗೆ ಸಂಧಾನ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಆಗ ಬಯಲಾದ ಸಂಗತಿಯಿಂದ ಪತಿಯ ಇಡೀ ಕುಟುಂಬವೇ ಬೆಚ್ಚಿ ಬಿದ್ದಿದೆ. ಅದೆಂದರೆ ತಾವು ಯಾರನ್ನು ಮಹಿಳೆ ಎಂಧು ಮನೆ ತುಂಬಿಸಿಕೊಂಡಿದ್ದೇವೋ ಆಕೆ ಮಹಿಳೆ ಅಲ್ಲ ಬದಲಿಗೆ ಪುರುಷ ಎಂಬುದು ಇವರಿಗೆ ಗೊತ್ತಾಗಿದೆ.

ಜನ್ಮ ಪತ್ರದಲ್ಲಿತ್ತು ಲಿಂಗ ರಹಸ್ಯ:

ಮಹಿಳೆಯ ಜನ್ಮ ಪತ್ರ ತೆಗೆದು ನೋಡಿದಾಗ ಅದರಲ್ಲಿ ಗಂಡು ಮಗು ಎಂದು ನಮೂದಾಗಿದೆ. ಇನ್ನೂ ವಿಚಿತ್ರ ಸಂಗತಿ ಎಂದರೆ ಮಗು ಜನನವಾದ 10 ವರ್ಷಗಳ ಬಳಿಕ ಜನ್ಮ ಪತ್ರ ಮಾಡಲಾಗಿದೆ.

ಇದನ್ನೇ ಆಧಾರವಾಗಿಟ್ಟುಕೊಂಡು ಹುಡುಗನ ಮನೆಯವರು ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ವರದಕ್ಷಿಣೆ ಕಿರುಕುಳ ನೀಡಿ ತಮ್ಮ ಮಗಳನ್ನು ಪೀಡಿಸಿದ್ದಲ್ಲದೇ, ಇದೀಗ ತಮ್ಮ ಮಗಳು ಹೆಣ್ನೇ ಅಲ್ಲ ಎನ್ನುವ ಮೂಲಕ ಆಕೆಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಯುವತಿಯ ಪೋಷಕರೂ ದೂರು ನೀಡಿದ್ದಾರೆ.

Follow Us:
Download App:
  • android
  • ios